ಬಂಟ್ವಾಳ: ಗ್ರಾಪಂ ಚುನಾವಣೆ ಮುಗಿದರೂ ಪಕ್ಷಾಂತರ ಇನ್ನೂ ನಿಂತಿಲ್ಲ. ವೀರಕಂಭದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯೆ ಲಲಿತಾ ಭಾನುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಮ್ಮುಖದಲ್ಲೇ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಈ ಸಂದರ್ಭ ಬಿಜೆಪಿ ಬೆಂಬಲಿತರಿಗೆ ವೀರಕಂಭ ಗ್ರಾಪಂ ಅಧಿಕಾರ ದೊರಕಲಿದೆ ಎಂದು ಬಿಜೆಪಿ ಕ್ಷೇತ್ರ ಪದಾಧಿಕಾರಿಗಳು ಸಂಭ್ರಮಿಸಿ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆಯನ್ನು ಚಿತ್ರ ಸಹಿತ ಬಿಡುಗಡೆ ಮಾಡಿದ್ದರು.
ಸಂಜೆ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿತು. ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮತ್ತಿತರರ ಸಮ್ಮುಖ ಅದೇ ಸದಸ್ಯೆ ಲಲಿತಾ ಕಾಂಗ್ರೆಸ್ ಧ್ವಜ, ಕಾಂಗ್ರೆಸ್ ಶಾಲು ಹಾಕಿಕೊಂಡು ನಿಂತ ಚಿತ್ರಗಳು ಕಾಂಗ್ರೆಸ್ ವತಿಯಿಂದ ಮಾಧ್ಯಮಗಳಿಗೆ ರವಾನೆಯಾದವು. ಈ ಸಂದರ್ಭ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಲಲಿತಾ ಅವರು ಕಾರ್ಯಕ್ರಮವೊಂದಕ್ಕೆ ಹೊರಟಿದ್ದಾಗ ಅವರನ್ನು ಬಿಜೆಪಿ ಕಚೇರಿಗೆ ಕರೆತಂದು ಪಕ್ಷಕ್ಕೆ ಸೇರ್ಪಡೆ ಮಾಡಿದ್ದಾರೆ. ಅವರಿಗೆ ವಿಷಯವೇನೆಂದು ಅರಿವಾಗುವಾಗ ಬಿಜೆಪಿ ಧ್ವಜ ಹಿಡಿದಾಗಿತ್ತು. ಇದೀಗ ಮತ್ತೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲ. ಅವರಾಗಿಯೇ ಪಕ್ಷ ತ್ಯಜಿಸಿ ಹೋಗುವುದಾದರೆ ಆ ವಿಚಾರ ಬೇರೆ. ಆದರೆ, ದಾರಿ ತಪ್ಪಿಸಿ ಸೇರ್ಪಡೆಗೊಳಿಸುವುದು ಬಿಜೆಪಿಗೆ ಶೋಭೆ ತರುವುದಿಲ್ಲ ಎಂದರು.
Kshetra Samachara
07/02/2021 09:08 pm