ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವ ಕಾಂಗ್ರೆಸ್ ಮಂಗಳೂರು ದಕ್ಷಿಣ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ಸಂಜನಾ ಚಲವಾದಿ ಆಯ್ಕೆ: ದ.ಕ.ಜಿಲ್ಲೆಯಲ್ಲಿ ಮೊದಲ ಮಂಗಳಮುಖಿಗೆ ರಾಜಕೀಯ ಸ್ಥಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ‌ ಮಂಗಳಮುಖಿಯರೊಬ್ಬರಿಗೆ ರಾಜಕೀಯ ಸ್ಥಾನ ದೊರಕುವ ಮೂಲಕ ಯುವ ಕಾಂಗ್ರೆಸ್‌ ದಕ್ಷಿಣ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ಸಂಜನಾ ಛಲವಾದಿ ಆಯ್ಕೆಯಾಗಿದ್ದಾರೆ.

ನಗರದಲ್ಲಿ ಬ್ಯೂಟಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮುಡಿ ಸಂಜನಾ ಚಲವಾದಿಯವರು ಈ ಹಿಂದೆ ಪರಿವರ್ತನ್ ಟ್ರಾನ್ಸ್ ಕ್ವೀನ್-2018 ಆಗಿ ಪ್ರಶಸ್ತಿಯನ್ನು ಮುಡಿಗೇರಿಸಿದ್ದರು. ಇದೀಗ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ನಡೆಸಿರುವ ಯುವ ಕಾಂಗ್ರೆಸ್ ಮಂಗಳೂರು ದಕ್ಷಿಣ ಬ್ಲಾಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಮಹಿಳಾ ವಿಭಾಗದಿಂದ ಸ್ಪರ್ಧಿಸಿದ್ದರು. ಜನವರಿ 10, 11 ಮತ್ತು 12 ರಂದು ಆನ್ಲೈನ್ ಮೂಲಕ ಮತದಾನ ನಡೆದು ಅದರ ಫಲಿತಾಂಶ ಪ್ರಕಟಗೊಂಡಿದೆ. ಅಧ್ಯಕ್ಷರಾಗಿ ಶಿವ, ಉಪಾಧ್ಯಕ್ಷರಾಗಿ ಸೋಹನ್, ದೀಕ್ಷಿತ್ ಪೂಜಾರಿ ಮತ್ತು ದಕ್ಷಿಣ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ಸಂಜನಾ ಚಲವಾದಿ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಸಂಜನಾ ಛಲವಾದಿಯವರು, ಯೂತ್ ಕಾಂಗ್ರೆಸ್ ದಕ್ಷಿಣ ಬ್ಲಾಕ್‌ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಮಂಗಳಮುಖಿಯರು ಬೇಡಿ, ಸೆಕ್ಸ್ ವರ್ಕರ್ ಆಗಿ ದುಡಿದೇ ಜೀವನ ನಿರ್ವಹಿಸಬೇಕಿದೆ‌. ಸಮಾಜದಲ್ಲಿ ಅವರಿಗೆ ಯಾವ ಅರ್ಹತೆಯೂ ಇರಲಿಲ್ಲ‌. ನಾನು ಇದನ್ನೆಲ್ಲಾ ದಾಟಿ ಮುಂದೆ ಬರುತ್ತೇನೆಂಬ ಛಲದಿಂದ ಹೋರಾಟ ನಡೆಸಿದೆ. ಇದೀಗ ನನಗೆ ನನ್ನ ಊರಲ್ಲಿ ದೊರಕದ ಗೌರವವನ್ನು ನನಗೆ ಮಂಗಳೂರಿಗರು ನೀಡಿ, ರಾಜಕೀಯದಲ್ಲಿ ಸ್ಥಾನಮಾನ ದೊರಕಿಸಿಕೊಟ್ಟಿದ್ದಾರೆ. ಇದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.

ನನ್ನನ್ನು ಸೇರಿಸಿ ಮಂಗಳಮುಖಿಯರಿಗೂ ಈಗಲೂ ಉದ್ಯೋಗ ಹಾಗೂ ವಸತಿಯ ಅಭದ್ರತೆ ಕಾಡುತ್ತಿದ್ದು, ಸಮಾಜದಲ್ಲಿ ಎಲ್ಲರಂತೆ ಮಂಗಳಮುಖಿಯರಿಗೂ ಸಮಾನ ಅವಕಾಶ, ಸ್ಥಾನಮಾನಗಳು ದೊರೆಯುವಂತೆ ನಾನು ಹೋರಾಟ ಮಾಡುತ್ತೇನೆ. ಇಂದು ನಾನು ಸಮಾಜದಲ್ಲಿ‌ ಈ ಸ್ಥಾನಮಾನವನ್ನು ಹೊಂದಲು ಪರಿವರ್ತನಾ ಚ್ಯಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ವೈಲೆಟ್ ಪಿರೇರಾ ಅವರೇ ಕಾರಣ. ಅವರಿಂದ ನಾನು ನನ್ನ ಜೀವನವನ್ನು ಘನತೆಯಿಂದ ನಡೆಸಬೇಕೆಂಬುದನ್ನು ಕಲಿತೆ. ಅವರ ಪ್ರೇರಣೆಯಿಂದಲೇ ನಾನು ಬ್ಯೂಟಿಷಿಯನ್ ಕೋರ್ಸ್ ಮುಗಿಸಿದ್ದು ಈಗ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದೇನೆ. ಈ ಸಂದರ್ಭ ನನಗೆ ಸಹಾಯ ಮಾಡಿರುವ ಎಲ್ಕರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

Edited By : Nirmala Aralikatti
Kshetra Samachara

Kshetra Samachara

06/02/2021 11:44 am

Cinque Terre

3.88 K

Cinque Terre

0

ಸಂಬಂಧಿತ ಸುದ್ದಿ