ಮುಲ್ಕಿ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಕೃಷಿ ಇಲಾಖೆ ಮಂಗಳೂರು ತಾಲೂಕು ಹಾಗೂ ವಿನಯ ಕೃಷಿ ಬೆಳೆಗಾರರ ಸಂಘ ಕೊಲ್ನಾಡು
ಜಂಟಿ ಆಶ್ರಯದಲ್ಲಿ ಕೊಲ್ನಾಡು ಬೆಳ್ಳಾಯರು ಗ್ರಾಮದ, ಚಂದ್ರಮೌಳೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ಕೃಷಿಕರಿಗೆ ಕೃಷಿ ಮಾಡಲು ಮಣ್ಣಿನ ಪರೀಕ್ಷೆ ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಪಣಂಬೂರು ಗ್ರಾ. ಪಂ. ಸದಸ್ಯೆ ಕುಸುಮಾರವರು ವಹಿಸಿ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ವಿನಯ ಕೃಷಿ ಬೆಳಗಾರರ ಸಂಘದ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಜಿ. ಪಂ.ಸದಸ್ಯ ವಿನೋದ್ ಬೊಳ್ಳೂರು ಪಡುಪಣಂಬೂರು, ಗ್ರಾ ಪಂ.ಅಭಿವೃದ್ಧಿ ಅಧಿಕಾರಿ ಕ್ಯಾಥರೀನ್, ಕೃಷಿ ಅಧಿಕಾರಿ ಬಶೀರ್. ತಾ. ಪಂ. ಸದಸ್ಯ ಶರತ್ ಕುಬೇವೂರ್, ಹಾಗೂ ಗ್ರಾ. ಪಂ. ಸದಸ್ಯ ಹರಿಪ್ರಸಾದ್ ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ಅಧಿಕಾರಿ ಬಶೀರ್ ರವರು ಕೃಷಿಕರಿಗೆ ಸಮಗ್ರ ಮಾಹಿತಿಯನ್ನು ಒದಗಿಸಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.ಕೃಷಿ ಇಲಾಖೆಯ ಅಧಿಕಾರಿ ಬಶೀರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
01/02/2021 07:25 pm