ಸುರತ್ಕಲ್: ಬಿಜೆಪಿ ಸುರತ್ಕಲ್ ಪೂರ್ವ 2ನೇ ವಾರ್ಡ್ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಂಗಳೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶಾಸಕ ಡಾ.ವೈ. ಭರತ್ ಶೆಟ್ಟಿ ಅವರು ತಡಂಬೈಲ್ ನ ಕುಲಾಲ್ ಭವನದಲ್ಲಿ ಶನಿವಾರ ಉದ್ಘಾಟಿಸಿದರು.
ರಕ್ತದೊತ್ತಡ (ಬಿಪಿ), ಮಧುಮೇಹ( ಶುಗರ್), ಕಣ್ಣಿನ ಪರೀಕ್ಷೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ಸಲಹೆ ಮತ್ತು ಪರೀಕ್ಷೆ ನಡೆಸಿ ಔಷಧ ನೀಡಲಾಯಿತು. ಈ ಸಂದರ್ಭ ಫಲಾನುಭವಿಗಳಿಗೆ ಉಚಿತ ಸೊಳ್ಳೆ ಪರದೆ ವಿತರಿಸಲಾಯಿತು.
ಮನಪಾ ಸದಸ್ಯೆ, ಬಿಜೆಪಿ ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿ, ಮನಪಾ ಸದಸ್ಯರಾದ ಸರಿತಾ ಶಶಿಧರ್, ನಯನ ಕೋಟ್ಯಾನ್, ಶೋಭಾ ರಾಜೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣೇಶ್ ಹೊಸಬೆಟ್ಟು, ಮಂಡಲ ಉಪಾಧ್ಯಕ್ಷ ವಿಠಲ ಸಾಲ್ಯಾನ್, ಕುಲಾಲ್ ಸಂಘ ಅಧ್ಯಕ್ಷರಾದ ಭೋಜ ಅಡ್ಯಾರ್,ಶಕ್ತಿಕೇಂದ್ರ ಪ್ರಮುಖ್ ಸುರೇಂದ್ರ ಸುವರ್ಣ, ಜಯಂತ್, ಸಹಪ್ರಮುಖ್ ರಾಕೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
23/01/2021 08:38 pm