ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: "ನಾನು ಕೂಲಿ ಕಾರ್ಮಿಕನಾಗಿ ಬಂದವ, ಬಂದ ದಾರಿ ಮರೆಯುವುದಿಲ್ಲ"; ಸಚಿವ ಅಂಗಾರ

ಕಡಬ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಪ್ರಯುಕ್ತ ಧರ್ಮ ಸಮ್ಮೇಳನ ದೇವಸ್ಥಾನದ ಧರ್ಮಸಮ್ಮೇಳನ ಮಂಟಪದಲ್ಲಿ ಇಂದು ನಡೆಯಿತು.

ಸಚಿವ, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಂಗಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರಕಾರದ ಹಣ ಅಗತ್ಯ ಬಿದ್ದಿಲ್ಲ. ಇಲ್ಲಿ ಭಕ್ತರ ಕಾಣಿಕೆಯಿಂದಲೇ ಅಭಿವೃದ್ಧಿ ಕೆಲಸ ಆಗುತ್ತದೆ. ನಾನೊಬ್ಬ ಕೂಲಿ ಕಾರ್ಮಿಕನಾಗಿ ಬಂದವನಾಗಿದ್ದು, ಬಂದ ದಾರಿಯನ್ನು ಮರೆಯುವುದಿಲ್ಲ. ನೀವೂ ಬಂದ ದಾರಿಯನ್ನು ಮರೆಯಬೇಡಿ. ಆಡಳಿತವನ್ನು ಪ್ರೀತಿ, ವಿಶ್ವಾಸದಿಂದ ಮಾಡಲು ಇಚ್ಛಿಸಿದ್ದೇನೆ. ಎಲ್ಲರೂ ಸಹಕಾರ ಕೊಡುವಂತೆ ವಿನಂತಿಸಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡಿದರು.

ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಹನ್ ರಾಮ್ ಸುಳ್ಳಿ, ಪ್ರಸನ್ನ ದರ್ಬೆ, ವನಜಾ ವಿ.ಭಟ್, ಮನೋಹರ ರೈ, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಸ್ವಾಗತಿಸಿದರು. ಮೋಹನ್ ರಾಮ್ ಸುಳ್ಳಿ ವಂದಿಸಿದರು. ರತ್ನಾಕರ ಎಸ್. ಮತ್ತು ವಿಶ್ವನಾಥ ನಡುತೋಟ ವಂದಿಸಿದರು.

Edited By : Nirmala Aralikatti
Kshetra Samachara

Kshetra Samachara

19/01/2021 06:17 pm

Cinque Terre

2.96 K

Cinque Terre

0

ಸಂಬಂಧಿತ ಸುದ್ದಿ