ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲಾ- ಕಾಲೇಜು ಆರಂಭ ವಿಚಾರದಲ್ಲಿ ಸರ್ಕಾರಕ್ಕೆ ಇನ್ನೂ ಸ್ಪಷ್ಟತೆ ಇಲ್ಲ: ಶಾಸಕ ಯು.ಟಿ. ಖಾದರ್

ಮಂಗಳೂರು: ರಾಜ್ಯದಲ್ಲಿ ಶಾಲಾ- ಕಾಲೇಜು ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿಲುವು ಇಲ್ಲ‌. ಹೀಗಾಗಿ ವಿದ್ಯಾರ್ಥಿಗಳು, ಶಿಕ್ಷಕರು ಗೊಂದಲದಲ್ಲಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.

ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟವಾಗಿ ನಿಲುವು ಪ್ರಕಟಿಸಬೇಕು. ಆವಾಗ ಜನರು ರಾಜ್ಯ ಸರ್ಕಾರದ ನಿರ್ಧಾರ ಒಪ್ಪುತ್ತಾರೆ. ಕೋವಿಡ್ ಸಂದರ್ಭ ಸಹ ಗೊಂದಲದ ಹೇಳಿಕೆ ನೀಡಲಾಗಿತ್ತು. ಇಂತಹ ಗೊಂದಲದ ಹೇಳಿಕೆಯಿಂದ ಜನರು ಪರದಾಡುವಂತಾಗಿದೆ.

ಹೀಗಾಗಿ ಜನರು ಸರ್ಕಾರದ ಸೂಚನೆ ಪಾಲಿಸದಂತಾಗಿದೆ ಎಂದ ಅವರು, ಶಾಲೆಗಳ ಆರಂಭದ ವಿ‍ಚಾರದಲ್ಲೂ ಸರ್ಕಾರಕ್ಕೆ ಗೊಂದಲ ಇದೆ. ಸೆಪ್ಟೆಂಬರ್‌ನಲ್ಲಿ ಶಾಲೆಗಳ ಆರಂಭ ಎಂದು ಹೇಳಿ ಗೊಂದಲ ಸೃಷ್ಟಿಸಿದೆ. ಇನ್ನು ಉಳಿದಿರುವ ಐದು ತಿಂಗಳಲ್ಲಿ ತರಗತಿ ನಡೆಸಬೇಕೇ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿ. ಮಕ್ಕಳಿಗೆ ‌ಹೇಗೆ ಶಿಕ್ಷಣ ಮುಖ್ಯವೋ ಅಷ್ಟೇ ಆರೋಗ್ಯ ಕೂಡಾ ಮುಖ್ಯ. ಡಿಸೆಂಬರ್ ವೇಳೆ ಕೊರೊನಾ ಹಾವಳಿ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಮಕ್ಕಳ ಶಿಕ್ಷಣಕ್ಕಿಂತ ಭೂ ಸುಧಾರಣೆ ‌ಕಾಯ್ದೆ ಪ್ರಮುಖವಾಯಿತೇ?

ಎಂದು ಪ್ರಶ್ನಿಸಿದ ಅವರು, ಸದ್ಯ ಎಸೆಸೆಲ್ಸಿ, ದ್ವಿತೀಯ ಪಿಯುಸಿಯವರಿಗೆ ಮಾತ್ರ ಪರೀಕ್ಷೆ ಮಾಡಲಿ ಎಂದು ಆಗ್ರಹಿಸಿದರು.

Edited By : Vijay Kumar
Kshetra Samachara

Kshetra Samachara

29/09/2020 11:19 pm

Cinque Terre

11.61 K

Cinque Terre

2

ಸಂಬಂಧಿತ ಸುದ್ದಿ