ಮಂಗಳೂರು: ದ.ಕ. ಜಿಲ್ಲೆಯಲ್ಲಿರುವ ಪ್ರವರ್ಗ ‘ಬಿ’ ಮತ್ತು ‘ಸಿ’ ಗೆ ಸೇರಿದ ಒಟ್ಟು 62 ದೇವಸ್ಥಾನ/ದೈವಸ್ಥಾನಗಳಿಗೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ.
ಮಂಗಳೂರು ತಾಲೂಕಿನ ಪ್ರವರ್ಗ ‘ಬಿ’ ಮತ್ತು ‘ಸಿ’ ಗೆ ಸೇರಿದ ಐದು ದೇವಸ್ಥಾನಗಳು, ಬಂಟ್ವಾಳ ತಾಲೂಕಿನ ಪ್ರವರ್ಗ ‘ಸಿ’ಗೆ ಸೇರಿದ 9 ದೇವಸ್ಥಾನಗಳು, ಬೆಳ್ತಂಗಡಿ ತಾಲೂಕು ಪ್ರವರ್ಗ ‘ಬಿ’ ಮತ್ತು ‘ಸಿ’ ಗೆ ಸೇರಿದ 18 ದೇವಸ್ಥಾನಗಳು, ಪುತ್ತೂರು ತಾಲೂಕಿನ 20 ದೇವಸ್ಥಾನಗಳು, ಸುಳ್ಯ ತಾಲೂಕಿನ 10 ದೇವಸ್ಥಾನಗಳು ಸೇರಿದಂತೆ ಜಿಲ್ಲೆಯ ಒಟ್ಟು 62 ದೇವಸ್ಥಾನ/ದೈವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್‌ನ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
11/11/2020 11:46 am