ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಹಾಗೂ ಯುನೈಟೆಡ್ ಬ್ಲಡ್ ಕರ್ನಾಟಕ ಜಂಟಿ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಈ ಸಂದರ್ಭ ಯುವ ಜನತಾದಳ ದ.ಕ. ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಯುವ ಜನತಾದಳ ಮುಖಂಡರಾದ ನಝೀರ್ ಕಂದಕ್, ಅಝರ್ ಕಂದಕ್ , ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ಆಸೀಫ್ ಕುದ್ರೋಳಿ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಫೈಝಲ್ ಮೊಹಮ್ಮದ್, ಮಂಗಳೂರು ಉತ್ತರ ಅಧ್ಯಕ್ಷ ರತೀಶ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಭರತ್ ಜಿ.ಹೆಗ್ಡೆ, ಪ್ರದೀಪ್ ಕುಮಾರ್ ಸಹಿತ ಯುನೈಟೆಡ್ ಬ್ಲಡ್ ಡೋನರ್ಸ್ ತಂಡದ ಸದಸ್ಯರು ಭಾಗವಹಿಸಿದ್ದರು.
Kshetra Samachara
16/12/2020 10:44 pm