ಮಂಗಳೂರು: ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಯ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ದಿಲ್ಲಿ ಚಲೋ ಮೂಲಕ ಭಾವನೆ ವ್ಯಕ್ತಪಡಿಸಲು ಬಂದಿರುವ ರೈತರ ಮೇಲೆ ಜಲ ಫಿರಂಗಿ, ತಂತಿ ಬೇಲಿ, ರಸ್ತೆ ಅಗೆತದ ಮೂಲಕ ಹತ್ತಿಕ್ಕುವುದು ಅಮಾನವೀಯ ಎಂದರು.
ಶಾಸಕ ಯು.ಟಿ.ಖಾದರ್ ಮಾತನಾಡಿ, ಕಾಯ್ದೆಯಿಂದ ಲಾಭ ಇರುತ್ತಿದ್ದರೆ ರೈತರು ರಸ್ತೆಗೆ ಬರುವ ಅಗತ್ಯ ಇರಲಿಲ್ಲ. ಸರಕಾರ ರೈತರ ಭಾವನೆ, ನೋವು ಅರ್ಥ ಮಾಡಿಕೊಳ್ಳದ ಕಾರಣ ರೈತರು ಬೀದಿಗೆ ಬಂದಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಪಂ ಸದಸ್ಯರಾದ ಕೆ.ಕೆ.ಶಾಹುಲ್ ಹಮೀದ್, ಮಮತಾ ಡಿ.ಎಸ್.ಗಟ್ಟಿ, ಕಾರ್ಪೊರೆಟರ್ ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.
Kshetra Samachara
03/12/2020 05:02 pm