ಮುಲ್ಕಿ: ಪ್ರಣವ ಚಾರಿಟೇಬಲ್ ಟ್ರಸ್ಟ್,ಮಂಗಳೂರು, ಬಿಜೆಪಿ ಸ್ಥಾನೀಯ ಸಮಿತಿ ಪಚ್ಚನಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದವಿನಂಗಡಿ ಲಯನ್ಸ್ ಮತ್ತು ಲಿಯೋ ಕ್ಲಬ್ ಕದ್ರಿಹಿಲ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ಕರ್ನಾಟಕ ವನ್ ಸಹಕಾರದೊಂದಿಗೆ ಪದವಿನಂಗ ಡಿ ಬೆನಕ ಹಾಲ್ ನಲ್ಲಿ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ ಗುರುತಿನ ಚೀಟಿ ವಿತರಣೆ ಜರುಗಿತು.
ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಉಪಸ್ಥಿತರಿದ್ದು, ಸುಮಾರು 369 ಕಾರ್ಡ್ ಗಳನ್ನು ಸಾರ್ವಜನಿಕರಿಗೆ ವಿತರಿಸಿದರು.
ಪ್ರಣವ ಸಂಸ್ಥೆ ಅಧ್ಯಕ್ಷ ಜಿ.ಆರ್. ಪ್ರಸಾದ್, ಮಹಾನಗರ ಪಾಲಿಕೆ ಸದಸ್ಯೆ ಸಂಗೀತ ಆರ್. ನಾಯಕ್,ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮ ಮುಗ್ರೋಡಿ,ಲಯನ್ಸ್ ಅಧ್ಯಕ್ಷೆ ಮಂಜುಳಾ ಶೆಟ್ಟಿ,ಲಿಯೋ ಕಾರ್ಯದರ್ಶಿ ಅದಿತಿ ಶೆಟ್ಟಿ,ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪೂಜಾ ಪೈ, ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಬೊಂದೇಲ್,ಕರ್ನಾಟಕ ವನ್ ನ ಶಶಿಧರ್, ಪ್ರಣವ ಸಂಸ್ಥೆ ಉಪಾಧ್ಯಕ್ಷ ಪ್ರಶಾಂತ್ ಪೈ ಉಪಸ್ಥಿತರಿದ್ದರು.
Kshetra Samachara
28/11/2020 08:01 pm