ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಪ್ಪಿನಮೊಗರು: ಶಾಸಕರಿಂದ ನಾನಾ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ

ಮಂಗಳೂರು: ಜಪ್ಪಿನಮೊಗರು ವಾರ್ಡಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್, ಜಪ್ಪಿನಮೊಗರು ವಾರ್ಡಿನ ಅಭಿವೃದ್ಧಿಗೆ ಶಾಸಕನಾಗಿ ನಾನು ಬದ್ಧನಾಗಿದ್ದೇನೆ.

ವಿವಿಧ ಇಲಾಖೆಗಳ ಅನುದಾನ ಜೋಡಿಸಿ ತುರ್ತು ಆಗಬೇಕಿರುವ ಕಾಮಗಾರಿಗಳಿಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಸಹಕಾರ ನೀಡಬೇಕೆಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಉಪಮೇಯರ್ ವೇದವತಿ, ಕಾರ್ಪೊರೇಟರ್ ವೀಣಾ ಮಂಗಳ, ಬಿಜೆಪಿ ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

25/11/2020 05:16 pm

Cinque Terre

4.1 K

Cinque Terre

0

ಸಂಬಂಧಿತ ಸುದ್ದಿ