ಉಡುಪಿ: ಸುವರ್ಣ ತ್ರಿಭುಜ ಆಳಕಡಲ ಬೋಟ್ ಮುಳುಗಡೆಯಾಗಿದ್ದರಿಂದ ಕಣ್ಮರೆಯಾದ ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಉಡುಪಿ ಶಾಸಕ ರಘುಪತಿ ಭಟ್ ಮನವಿ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಿಎಂ ಯಡಿಯೂರಪ್ಪ ಅವರನ್ನು ಇಂದು ಶಾಸಕ ರಘುಪತಿ ಭಟ್ ಭೇಟಿಯಾಗಿ, ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಕಣ್ಮರೆಯಾದ 7 ಮಂದಿ ಬಡಪಾಯಿ ಮೀನುಗಾರರ ಕುಟುಂಬಕ್ಕೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಕನಿಷ್ಠ ತಲಾ 10 ಲಕ್ಷ ರೂ. ಪರಿಹಾರ ಶೀಘ್ರ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದರು.
ಸುವರ್ಣ ತ್ರಿಭುಜ ಡೀಪ್ ಸೀ ಬೋಟ್ 2018ರ ಡಿಸೆಂಬರ್ 15ರಂದು ಸಮುದ್ರದಲ್ಲಿ ಅಪಘಾತಕ್ಕೀಡಾಗಿ ಮುಳುಗಡೆಯಾಗಿತ್ತು. ಈ ದುರಂತದಲ್ಲಿ ಮಾಲೀಕ ಸಹಿತ 7 ಮೀನುಗಾರರು ಇದುವರೆಗೂ ಕಣ್ಮರೆಯಾಗಿದ್ದಾರೆ. ಕುಟುಂಬದವರು ಇವರನ್ನೇ ಅವಲಂಬಿಸಿಕೊಂಡಿದ್ದು, ಈ 7 ಮೀನುಗಾರರ ಕುಟುಂಬದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ಶಾಸಕರು ಮುಖ್ಯಮಂತ್ರಿಗಳಿಗೆ ಕಳಕಳಿಯಿಂದ ಮನವಿ ಮಾಡಿದರು.
Kshetra Samachara
05/11/2020 05:03 pm