ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುತ್ತೆತ್ತೂರು: "ಗ್ರಾಮಾಂತರ ಪ್ರದೇಶ ಗಮನದಲ್ಲಿರಿಸಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ"

ಮುಲ್ಕಿ: ಗ್ರಾಮಾಂತರ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಸರಕಾರದ ವಿಶೇಷ ಅನುದಾನದ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ. ಸರಕಾರದ ಯೋಜನೆಗಳು ಜನರಿಗೆ ಅನುಕೂಲವಾಗುವ ರೀತಿ ವಿನಿಯೋಗಿಸಲಾಗುತ್ತಿದೆ ಎಂದು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಪೆರ್ಮುದೆ ಗ್ರಾಪಂ ವ್ಯಾಪ್ತಿಯ ಕುತ್ತೆತ್ತೂರು ಬಾಜಾವು ಬರಿಬಟ್ಲ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಪಂ ಸದಸ್ಯೆ ಶಶಿಕಲಾ ಶೆಟ್ಟಿ, ಪೆರ್ಮುದೆ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಧರ ಕಣಿ, ಮಾಜಿ ಉಪಾಧ್ಯಕ್ಷ ಕಿಶೋರ್ ಕೋಟ್ಯಾನ್, ಮಾಜಿ ಸದಸ್ಯರಾದ ಜಗನ್ನಾಥ ಶೆಟ್ಟಿ, ರಾಮಪ್ರಸಾದ್ ಪಂಡಿತ್,ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪ್ರಸಾದ್ ಅಂಚನ್,ಗಂಗಾಧರ ಮೆಣಸಿನಕಾಡು,ರೈತ ಮೋರ್ಚಾ ಉಪಾಧ್ಯಕ್ಷ ಕುಸುಮಾಕರ ಶೆಟ್ಟಿ, ಜಯಂತ ಸಾಲ್ಯಾನ್ ತೋಕೂರು,ಸುಧಾಕರ ಕಾಮತ್, ಚೇಳೈರು ಗ್ರಾಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಮಂಗಳಪೇಟೆ ಮೆಣಸಿನಕಾಡು ರಸ್ತೆ ಕಾಂಕ್ರೀಟಿ ಕರಣ 7 ಲಕ್ಷ, ಕುತ್ತೆತ್ತೂರು ನಾಯರ್ ಕೋಡಿ ಬಾಜಾವು ರಸ್ತೆ ಕಾಂಕ್ರೀಟಿಕರಣ 10 ಲಕ್ಷ, ಪೆಡ್ಡಿಯಂಗಡಿ ಅದರ್ಶ ನಗರದಿಂದ ಮಿತ್ತೋಡಿ ದೇವಸ್ಥಾನದ ವರೆಗೆ ರಸ್ತೆ ಕಾಂಕ್ರೀಟಿಕರಣ 5 ಲಕ್ಷ , ಎಂಆರ್ ಪಿಎಲ್ ಗೇಟ್ ರಸ್ತೆ ಕಾಂಕ್ರೀಟಿ ಕರಣ 5 ಲಕ್ಷ, ರಸ್ತೆಗಳ ಉದ್ಘಾಟನೆ ಮಾಡಲಾಯಿತು.

Edited By : Vijay Kumar
Kshetra Samachara

Kshetra Samachara

02/11/2020 11:45 pm

Cinque Terre

4.53 K

Cinque Terre

0

ಸಂಬಂಧಿತ ಸುದ್ದಿ