ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ: ಶಾಸಕ ಸುಕುಮಾರ ಶೆಟ್ಟಿ ವಿಶ್ವಾಸ

ಬೈಂದೂರು: ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚಿನ ಪಂಚಾಯತ್ ಗಳಲ್ಲಿ ಜಯ ಸಾಧಿಸಲಿದೆ. 39 ಪಂಚಾಯತ್‍ಗಳ ಪೈಕಿ ಮೂರು ಪಂಚಾಯತ್‍ಗಳು ಪಟ್ಟಣ ಪಂಚಾಯತ್‍ಗಳಾಗಿದ್ದು, ಉಳಿದ ಎಲ್ಲ ಪಂಚಾಯತ್‍ಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬರಲಿದ್ದಾರೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವಿಶ್ವಾಸ ವ್ಯಕ್ತ ಪಡಿಸಿದರು.

ಅವರು ಚಿತ್ತೂರಿನಲ್ಲಿ ನಡೆದ ವಿಶೇಷ ಕಾರ್ಯಕಾರಿಣಿಯಲ್ಲಿ ಮಾತನಾಡಿದರು.

ವಂಡ್ಸೆ ಸ್ವಾವಲಂಬನಾ ಕೇಂದ್ರ ವಿಚಾರ ಪ್ರಸ್ತಾವಿಸಿದ ಅವರು, ಸರ್ಕಾರಿ ಕಟ್ಟಡದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಮತಿಯಿಲ್ಲದೇ ಪಂಚಾಯತ್ ಅಧಿಕಾರ ನಿರ್ವಹಣೆ ಮಾಡುವಂತಿಲ್ಲ. ಖಾಸಗಿಯಾಗಿ ನಾಲ್ಕಾರು ಜನ ಹುಡುಗಿಯರು ಹೊಲಿಗೆ ತರಬೇತಿ ಪಡೆಯುತ್ತಿದ್ದರು. ಅವರಿಗೆ ಬೇರೆ ಕಡೆ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳೆಯರನ್ನು ಬೀದಿಪಾಲು ಮಾಡಿದ್ದಾರೆ ಎನ್ನುವ ಆರೋಪಗಳಿಗೆ ಹುರುಳಿಲ್ಲ. ನಾನು ಬೈಂದೂರು ಕ್ಷೇತ್ರದಲ್ಲಿ ಜನರ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುವುದನ್ನು ಜನ ಗುರುತಿಸಿದ್ದಾರೆ ಎಂದರು.

Edited By :
Kshetra Samachara

Kshetra Samachara

20/10/2020 07:23 pm

Cinque Terre

2.76 K

Cinque Terre

0

ಸಂಬಂಧಿತ ಸುದ್ದಿ