ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ ಬುಡಾ ಅಧ್ಯಕ್ಷರಿಗೂ ಫೇಸ್ ಬುಕ್ ಫೇಕ್ ಐಡಿ ಕಿರುಕುಳ

ಬಂಟ್ವಾಳ: ಬಂಟ್ವಾಳ ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಅವರ ಫೇಸ್ ಬುಕ್ ಅಕೌಂಟ್ ನ ಡೂಪ್ಲಿಕೇಟ್ ಮಾಡಲಾಗಿರುವುದು ಬೆಳಕಿಗೆ ಬಂದಿದೆ. ವಂಚಕರು ನಕಲಿ ಅಕೌಂಟ್ ಮೂಲಕ ಶೆಟ್ಟಿ ಅವರ ಸ್ನೇಹಿತರಿಗೆಲ್ಲಾ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಅವರು ಸ್ನೇಹಿತರಾದೊಡನೆ ಅವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಗೂಗಲ್ ಪೇ, ಫೋನ್ ಪೇ ಅಥವಾ ಅಕೌಂಟಿಗೆ ಹಾಕಿ, ನಾಳೆ ಬೆಳಗ್ಗೆ 10 ಗಂಟೆಗೆ ವಾಪಸ್ ಮಾಡುತ್ತೇನೆ ಎಂಬ ಆಗ್ರಹವನ್ನೂ ವಂಚಕರು ಮಾಡಿದ್ದು, ಇದನ್ನು ನಂಬಿ ಕೆಲವರು ಮೋಸ ಹೋಗಿದ್ದಾರೆ.

ಇದೇ ರೀತಿ ಶಿಕ್ಷಣ ಸಂಸ್ಥೆಯೊಂದರ ಸಿಬ್ಬಂದಿಯ ಹೆಸರಲ್ಲೂ ನಕಲಿ ಖಾತೆ ಸೃಷ್ಟಿಯಾಗಿದ್ದು, ಆ ಖಾತೆಯಿಂದ ಹಲವರಿಗೆ ಹಣಕ್ಕೆ ಬೇಡಿಕೆ ಹೋಗಿದೆ. ಪತ್ರಕರ್ತರು, ಪೊಲೀಸರು, ಶಿಕ್ಷಕರು, ರಾಜಕಾರಣಿಗಳು, ಕಲಾವಿದರ ಹೆಸರಲ್ಲಿ ಈಗಾಗಲೇ ಇಂಥ ನಕಲಿ ಡೂಪ್ಲಿಕೇಟ್ ಖಾತೆಗಳು ಸೃಷ್ಟಿಯಾಗಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿವೆ.

ಈ ಪ್ರಕರಣದಲ್ಲಿ ದೇವದಾಸ ಶೆಟ್ಟಿಯವರು ಸೈಬರ್ ಕ್ರೈಮ್ ವಿಭಾಗಕ್ಕೆ ಈಗಾಗಲೇ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

Edited By :
Kshetra Samachara

Kshetra Samachara

11/10/2020 09:54 am

Cinque Terre

9.7 K

Cinque Terre

0

ಸಂಬಂಧಿತ ಸುದ್ದಿ