ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಪ್ಪನಾಡು: ಸಂಭ್ರಮದ ಹಗಲು ರಥೋತ್ಸವ

ಮುಲ್ಕಿ: ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹಗಲು ರಥೋತ್ಸವ ವಿಜ್ರಂಭಣೆಯಿಂದ ನಡೆಯಿತು.

ಪ್ರಾತಃಕಾಲ ದೇವಸ್ಥಾನದಲ್ಲಿ ಅರ್ಚಕರಾದ ಶ್ರೀಪತಿ ಉಪಾಧ್ಯಾಯ ಹಾಗೂ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಶ್ರೀದೇವರ ಬಲಿ ಉತ್ಸವ ಹೊರಟು ಹಗಲು ರಥೋತ್ಸವ ,ಪಲ್ಲ ಪೂಜೆ,ಮಹಾ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗಿಯಾದರು.

ಈ ಸಂದರ್ಭ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು , ಧರ್ಮದರ್ಶಿ ಹರಿಕೃಷ್ಣ ಪುನರೂರು, ವೇ ಮೂ ವಾದಿರಾಜ ಉಪಾಧ್ಯಾಯ,ವೆಂಕಟೇಶ್ ಹೆಬ್ಬಾರ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ, ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಉದ್ಯಮಿ ಅರವಿಂದ ಪೂಂಜ ಕಾರ್ನಾಡ್, ಡಾ. ಹರಿಶ್ಚಂದ್ರ ಪಿ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ರಾತ್ರಿ ಮಲ್ಲಿಗೆ ಪ್ರಿಯೆ ಬಪ್ಪನಾಡು ಶ್ರೀದೇವಿಗೆ ಶಯನೋತ್ಸವ,ನಾಳೆ(ಮಾ.24) ಮಹಾರಥೋತ್ಸವ ನಡೆಯಲಿದೆ.

Edited By : PublicNext Desk
Kshetra Samachara

Kshetra Samachara

23/03/2022 12:37 pm

Cinque Terre

2.1 K

Cinque Terre

1