ಮುಲ್ಕಿ: ಅತಿಕಾರಿಬೆಟ್ಟು ಗ್ರಾಪಂ ವತಿಯಿಂದ "ನಮ್ಮ ಗ್ರಾಮ ನಮ್ಮ ಜವಾಬ್ದಾರಿ" 'ನಮ್ಮ ನಡಿಗೆ ತ್ಯಾಜ್ಯಮುಕ್ತ ಕಡೆಗೆ...' ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಅತಿಕಾರಿ ಬೆಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ವಹಿಸಿ ಮಾತನಾಡಿ, ತ್ಯಾಜ್ಯಮುಕ್ತ ಆಂದೋಲನ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮದ ಪ್ರತಿ ಮನೆಯಿಂದ ಆರಂಭವಾದರೆ ಮಾತ್ರ ಗ್ರಾಮ ಹಾಗೂ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದರು. ಅತಿಕಾರಿ ಬೆಟ್ಟು ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ವೈಯಕ್ತಿಕ ಮತ್ತು ಸಮುದಾಯಿಕ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕು.
ಮುಂದಿನ ದಿನಗಳಲ್ಲಿ ಗ್ರಾಪಂ ವತಿಯಿಂದ ಸ್ವಚ್ಛ ಒಣ/ಪ್ಲಾಸ್ಟಿಕ್ ಕಸವನ್ನು ಪ್ರತಿ ಮನೆಗಳಿಂದ ಸಂಗ್ರಹಿಸಿ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರು ಕಸ ವಿಲೇವಾರಿ ಮತ್ತು ಸ್ವಚ್ಛತೆ ಬಗ್ಗೆ ಗ್ರಾಪಂ ಜೊತೆ ಸಹಕರಿಸಬೇಕು ಎಂದರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೈಲೊಟ್ಟು ವಿನ ಶಿಕ್ಷಕರಾದ ಮೇರಿ,ಕೆ.ಎನ್.ಕೋಟ್ಯಾನ್,ಭೋಜ ಅಂಚನ್, ವಸುಧಾ ಉಪಸ್ಥಿತರಿದ್ದರು. ಅತಿಕಾರಿ ಬೆಟ್ಟು ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಕಕ್ವ ಶಾಲೆಯ ಶಿಕ್ಷಕಿ ಅಶ್ವಿನಿ ಶೆಟ್ಟಿ, ಸ್ವಾಗತಿಸಿದರು. ಶಿಕ್ಷಕಿ
ಹೇಮಲತಾ ಮೈಲೊಟ್ಟು ವಂದಿಸಿದರು.
Kshetra Samachara
28/01/2021 01:33 pm