ಉಳ್ಳಾಲ: ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ ನಿರ್ಗತಿಕರು, ಅನಾಥರ ಸೇವೆ ಮಾಡುವವರ ಸಂಖ್ಯೆ ವಿರಳ. ಆಶ್ರಮದ ಮೂಲಕ ಮಾಡುವ ಸೇವೆ ಭಗವಂತನಿಗೆ ಅತ್ಯಂತ ಪ್ರೀತಿಯದ್ದಾಗಿದ್ದು ಇದರಲ್ಲಿ ಸಿಗುವ ತೃಪ್ತಿ ಇನ್ಯಾವುದರಲ್ಲೂ ಸಿಗುವುದಿಲ್ಲ ಎಂದು ಶ್ರೀ ಕ್ಷೇತ್ರ ಮಾಣಿಲದ ಮೋಹನ್ ದಾಸ ಪರಮಹಂಸ ಸ್ವಾಮೀಜಿ ನುಡಿದರು.
ದೇರಳಕಟ್ಟೆ ಬೆಳ್ಮದ ಸೇವಾಭಾವ ಚಾರಿಟೇಬಲ್ ಟ್ರಸ್ಟ್ (ರಿ) ಇದರ ವತಿಯಿಂದ ನಡೆಸಲ್ಪಡುವ ಸೇವಾಶ್ರಮಕ್ಕೆ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಬೃಹತ್ ವೈದ್ಯಕೀಯ ಶಿಬಿರ ಹಾಗೂ ನೂತನವಾಗಿ ನಿರ್ಮಾಣಗೊಳ್ಳಲಿರುವ ನಿರ್ಗತಿಕ ವಯೋವೃದ್ಧರ(ಪುರುಷರ) ಅನಾಥಾಶ್ರಮಕ್ಕೆ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ರೆವರೆಂಡ್ ಫಾದರ್ ವಲೇರಿಯನ್ ಮಾತನಾಡಿ, ಒಳ್ಳೆಯ ಕೆಲಸ ದೇವರ ಕೆಲಸವಾಗಿದ್ದು ಇದನ್ನು ಆಶ್ರಮದಲ್ಲಿ ಮಾಡಲಾಗುತ್ತಿದೆ. ತೋರಿಕೆಯ ಸೇವೆ ಎಂದಿಗೂ ಶಾಶ್ವತ ಅಲ್ಲ. ಸೇವಾ ಚಟುವಟಿಕೆಗಳಿಗೆ ವಿಶಾಲ ಮನಸ್ಥಿತಿಯ ದಾನಿಗಳೂ ಇರುತ್ತಾರೆ ಎಂದು ತಿಳಿಸಿದರು.
ವಿದಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್,ಕರ್ನಾಟಕ ಬ್ಯಾಂಕ್ ನ ಸಿಇಒ ಮಹಾಬಲೇಶ್ವರ್ ಭಟ್ ,ಲಯನ್ಸ್ ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ,ಟ್ರಸ್ಟ್ ಅಧ್ಯಕ್ಷ ಡಾ.ಜಿ.ಆರ್.ಶೆಟ್ಟಿ ,ಮೊದಲಾದವರು ಉಪಸ್ಥಿತರಿದ್ದರು.
Kshetra Samachara
22/08/2022 02:45 pm