ಮೂಡುಬಿದಿರೆ:ಮೂಡುಬಿದಿರೆಯ ವಿಧ್ಯಾ ರಾಜೇಂದ್ರ ಎಂಬವರ ಮಗ ರಂಜನ್ ಲಿವರ್ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದು. ಚಿಕಿತ್ಸೆಗೆ ಸರಿಸುಮಾರು 6 ಲಕ್ಷದಷ್ಟು ಹಣ ಖರ್ಚಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈ ಪುಟ್ಟ ಕಂದಮ್ಮ ಕಳೆದ ಹತ್ತು ದಿನಗಳ ಹಿಂದೆ ಸಾವನಪ್ಪಿದೆ.
ಈ ಬಡ ಕುಟುಂಬದ ಕಷ್ಟಕ್ಕೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಸಂಗ್ರಹಿಸಿದ ಹಣವನ್ನು ಅವರ ಕುಟುಂಬಕ್ಕೆ ಹಾಗೂ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಗುತ್ತಿಗೆ ಮನೆಯ ದೇವನಂದ ಪೂಜಾರಿಯವರ ಪತ್ನಿ ಹರ್ಷಲತಾ ಕರುಳಿನ ಸಮಸ್ಯೆಯ ಚಿಕಿತ್ಸೆಗೆ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಗ್ರಹಿಸಿದ ಧನ ಸಹಾಯವನ್ನು ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪಧಾದಿಕಾರಿಗಳು ಹಾಗೂ ಸೇವಾ ಮಾಣಿಕ್ಯರ ಸಮ್ಮುಖದಲ್ಲಿ ಹಸ್ತಾಂತರಿಸಿದರು.
Kshetra Samachara
31/07/2022 09:05 pm