ಮುಲ್ಕಿ:ಕಾರ್ಗಿಲ್ ವಿಜಯೋತ್ಸವದ ದಿನಾಚರಣೆಯ ಅಂಗವಾಗಿ ನಿವೃತ್ತಯೋಧ ಸುಬೇದಾರ ಶ್ರೀಕಾಂತ್ ದ್ವಿವೇಧಿ ರವರನ್ನು ಎಸ್. ಕೋಡಿ ಯ ಅವರ ನಿವಾಸದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಪ್ಪನಾಡು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ವೆಂಕಟೇಶ್ ಹೆಬ್ಬಾರ್ ಮಾತನಾಡಿ ದೇಶದ ಭದ್ರತೆಗಾಗಿ ಹೋರಾಟ ನಡೆಸುವ ಮೂಲಕ ಪ್ರಾಣವನ್ನೇ ಮುಡಿಪಾಗಿಡುವ ವೀರ ಯೋಧರನ್ನು ನೆನಪಿಸಿಕೊಳ್ಳುವುದು ಆದ್ಯ ಕರ್ತವ್ಯ ಎಂದರು.
ಖಜಾಂಚಿ ಲ .ಬಿ. ಶಿವಪ್ರಸಾದ್, ಲಯನ್. ಅಶ್ವಿನಿ ಎಸ್. ಲ ಪ್ರತಿಭಾ ಹೆಬ್ಬಾರ್ ಲ. ಪೂರ್ಣಿಮಾ ದಿನೇಶ್ ಶೆಟ್ಟಿ ಮತ್ತಿತರರು ಉಸ್ಥಿತರಿದ್ದರು.
Kshetra Samachara
30/07/2022 11:39 am