ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಲಾಡಿ ಶ್ರೀನಾಗಬ್ರಹ್ಮ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಆಯ್ಕೆ

ಮೂಡುಬಿದಿರೆ: ಇಲ್ಲಿನ ಲಾಡಿ ಶ್ರೀನಾಗಬ್ರಹ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಅನಂತಕೃಷ್ಣ ರಾವ್, ಕಾರ್ಯದರ್ಶಿಯಾಗಿ ರವಿಪ್ರಸಾದ್ ಶೆಟ್ಟಿ ಕೆ. ಅವರನ್ನು ಧಾರ್ಮಿಕ ದತ್ತಿ ಇಲಾಖೆ ಆಯ್ಕೆ ಮಾಡಿದೆ ಎಂದು ದ.ಕ ಜಿಲ್ಲಾ ಸಹಾಯಕ ಆಯುಕ್ತರ ಪ್ರಕಟಣೆ ತಿಳಿಸಿದೆ.

ಸದಸ್ಯರಾಗಿ ಪ್ರಶಾಂತ್, ಪೂರ್ಣಿಮಾ, ಮಾದವ ಶೆಟ್ಟಿ, ಎಂ.ಗಣೇಶ್ ರಾವ್, ಸದಾನಂದ ಬಿ.ಪೂಜಾರಿ ಹಾಗೂ ಪ್ರಧಾನ ಅರ್ಚಕ ರಾಘವೇಂದ್ರ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಮಿತಿಯು ಮುಂದಿನ ಮೂರು ವರ್ಷಗಳ ಅವಧಿಗೆ ಉರ್ಜಿತದಲ್ಲಿರುತ್ತದೆ.

Edited By : PublicNext Desk
Kshetra Samachara

Kshetra Samachara

23/07/2022 12:37 pm

Cinque Terre

652

Cinque Terre

0

ಸಂಬಂಧಿತ ಸುದ್ದಿ