ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಕ್ ವೆಲ್ ನಿರ್ವಹಣೆ ದುಸ್ಥಿತಿ: ಬಂಟ್ವಾಳ ಪುರಸಭೆ ಸದಸ್ಯರ ಆಕ್ರೋಶ

ಬಂಟ್ವಾಳ: ಬಂಟ್ವಾಳ ಪುರಸಭೆಯ ಜಕ್ರಿಬೆಟ್ಟು ಜಾಕ್ ವೆಲ್ ನಲ್ಲಿ ನಿರ್ವಹಣೆಯ ದುಸ್ಥಿತಿ ಕುರಿತು ಪುರಸಭಾ ಸದಸ್ಯರು ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಜನಾರ್ದನ ಚಂಡ್ತಿಮಾರ್ ಮತ್ತು ಗಂಗಾಧರ ಪೂಜಾರಿ, ಪಂಪ್ ಆಪರೇಟರ್ ಸಹಿತ ಪಂಪ್ ಹೌಸ್ ಗೆ ನೇಮಕಾತಿ ವಿಚಾರದಿಂದ ತೊಡಗಿ, ನಿರ್ವಹಣೆಯವರೆಗೆ ಅಧಿಕಾರಿಗಳು ಅನಾದರ ತೋರುತ್ತಿದ್ದಾರೆ ಎಂದು ಆಪಾದಿಸಿದರೆ, ವಾಸು ಪೂಜಾರಿ ಇದಕ್ಕೆ ಪೂರಕವಾಗಿ ಮಾತನಾಡಿದರು.

ಇಬ್ಬರನ್ನಾದರೂ ಅಲ್ಲಿ ನೇಮಿಸಬೇಕು, 45 ಸಾವಿರ ಮಂದಿ ಕುಡಿಯುವ ನೀರಿನ ಟ್ರೀಟ್ಮೆಂಟ್ ಪ್ಲಾಂಟ್ ನಲ್ಲಿ ಯಾವುದೇ ಸಲಕರಣೆ ಇಲ್ಲ, ಶುಚಿತ್ವವನ್ನೂ ಮಾಡಲು ಜನರಿಲ್ಲ, ಹೀಗಾದರೆ ಪುರಸಭೆ ಇದ್ದೂ ಏನು ಪ್ರಯೋಜನ, ನಾವು ಸಭೆಗೆ ಬಂದು ನೀವು ಹೇಳಿದ್ದನ್ನು ಕೇಳಿಕೊಂಡು ಹೋಗಬೇಕಾಗುತ್ತದೆ ಎಂದರು. ಇದಕ್ಕೆ ದನಿಗೂಡಿಸಿದ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಆಡಳಿತ ನಡೆಸುವ ಜನಪ್ರತಿನಿಧಿಗಳಿಗೆ ಸಿಬ್ಬಂದಿಯ ಹಿಡಿತವಿಲ್ಲ ಎಂದು ಹೇಳಿದರೆ, ಉತ್ತರಿಸಿದ ಅಧ್ಯಕ್ಷ ಮಹಮ್ಮದ್ ಶರೀಫ್, ಹುದ್ದೆ ನೇಮಕಾತಿ ಕುರಿತು ಸಭೆಯಲ್ಲಿ ನಿರ್ಣಯಿಸಿ ಕಳುಹಿಸಿದರೆ, ಅದು ಅನುಷ್ಠಾನವೇ ಆಗುವುದಿಲ್ಲ, ನಾವು ಹೇಳಿದಂತೆ ಅಧಿಕಾರಿಗಳು ಕೇಳುವುದಿಲ್ಲ, ಸಿಬ್ಬಂದಿಯಲ್ಲೇ ಹೊಂದಾಣಿಕೆ ಇಲ್ಲ ಎಂದರು.

ಪುರಸಭೆಯಲ್ಲಿ ಸಿಬ್ಬಂದಿ ನೇಮಕಾತಿ ವಿಚಾರವಾಗಿ ಲೋಡರ್ಸ್ ಎಂದು ನೇಮಿಸಲ್ಪಟ್ಟವರು ಕಚೇರಿಯೊಳಗೆ ಕೆಲಸ ಮಾಡುತ್ತಿದ್ದಾರೆ. ಯಾವ ಉದ್ದೇಶಕ್ಕೆ ಸೇರಿದ್ದಾರೋ ಆ ಕೆಲಸವನ್ನು ಮಾಡುತ್ತಿಲ್ಲ ಎಂಬ ಕುರಿತು ಜನಾರ್ದನ ಚಂಡ್ತಿಮಾರ್ ಗಮನ ಸೆಳೆದರು. ಒಂದು ಹಂತದಲ್ಲಿ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಮತ್ತು ಗೋವಿಂದ ಪ್ರಭು ಮಧ್ಯೆ ಮಾತಿನ ಚಕಮಕಿ ನಡೆದು, ನನಗೆ ಹಲವು ಹೆಚ್ಚುವರಿ ಹೊಣೆಗಾರಿಕೆ ಇದೆ ಎಂದು ಕೆಲಸದ ಒತ್ತಡ ಇರುವ ಕುರಿತು ತಿಳಿಸಿದರು.

ಇದೇ ಮಾತನ್ನು ಸಿಬ್ಬಂದಿ ರಜಾಕ್ ಅವರೂ ತಿಳಿಸಿದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣೆಯ ಕುರಿತು ಖಾಸಗಿ ಏಜನ್ಸಿಯೊಂದು ನಿರ್ವಹಣೆ ಮಾಡುವ ಕುರಿತು ಮಾಹಿತಿಯನ್ನು ನೀಡಿತು.

Edited By : PublicNext Desk
Kshetra Samachara

Kshetra Samachara

19/05/2022 09:54 pm

Cinque Terre

2.34 K

Cinque Terre

0

ಸಂಬಂಧಿತ ಸುದ್ದಿ