ಬಜಪೆ:ಬಿಲ್ಲವ ಸಮಾಜ ಸೇವಾ ಸಂಘ ಗುರುಪುರ ಇದರ ನೂತನ ಸಮುದಾಯ ಭವನದ ಕಟ್ಟಡಕ್ಕೆ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸುಮಾರು 50 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಲು ಶ್ರಮಿಸಿದ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರಿಗೆ ಬಿಲ್ಲವ ಸಮಾಜ ಸೇವಾ ಸಂಘ ( ರಿ) ಗುರುಪುರ ಇದರ ಪ್ರಮುಖರು, ಗಣ್ಯರು ಶಾಲು ಹಾಕಿ ಸನ್ಮಾನಿಸಿದರು.
Kshetra Samachara
11/04/2022 09:29 pm