ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಕೊಳ್ನಾಡಿನಲ್ಲಿ ಮೂವರ ಬಂಧನ

ಬಂಟ್ವಾಳ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ವಿಟ್ಲ ಪೋಲೀಸರು ಮೂವರು ಆರೋಪಿ ಗಳ ಸಹಿತ ಒಟ್ಟು ಸಾವಿರಾರು ರೂ ಮೌಲ್ಯದ ವಿವಿಧ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುದ್ರಿಯಾ ಎಂಬಲ್ಲಿ ನಡೆದಿದೆ.

ಆರೋಪಿಗಳಾದ ಕರುಣಾಕರ, ಶರತ್ ಕುಮಾರ್, ಅವಿನಾಶ್ ಬಂಧಿತರು.

ಬಂಧಿತರಿಂದ 10 ಸಾವಿರ ರೂ ಮೌಲ್ಯದ ಲ್ಯಾಪ್ ಟಾಪ್, 15.500 ಸಾವಿರ ನಗದು, ಕೀಪ್ಯಾಡ್ ಮೊಬೈಲ್ ಐದು, ಆರು ಸ್ಮಾರ್ಟ್ ಪೋನ್ ಗಳನ್ಜು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕುದ್ರಿಯಾ ಎಂಬಲ್ಲಿ ಹಣ ಪಣಕ್ಕಿಟ್ಟು, ಐಪಿ.ಎಲ್ ಕ್ರಿಕೆಟ್ ಪಂದ್ಯಾಟದ ಬೆಟ್ಟಿಂಗ್ ನಡೆಸುತ್ತಿದ್ದ ಕುರಿತು ಖಚಿತ ಮಾಹಿತಿ ಬಂದ ಮೇರೆಗೆ ವಿಟ್ಲ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ಅವರ ಮಾರ್ಗದರ್ಶನ ದಂತೆ ಎಸ್.ಐ.ಸಂದೀಪ್ ಕುಮಾರ್ ಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿದೆ.ವಿಚಾರಿಸಿದಾಗ ಲಕ್ನೋ ಹಾಗೂ ಹೈದರಾಬಾದ್ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದು ಬೆಟ್ಟಿಂಗ್ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಬಳಿಕ ಪೋಲೀಸರು, ಆರೋಪಿಗಳು ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

05/04/2022 02:47 pm

Cinque Terre

2.09 K

Cinque Terre

0

ಸಂಬಂಧಿತ ಸುದ್ದಿ