ಬಜಪೆ:ವಿಜಯ ಯುವ ಸಂಗಮ (ರಿ) ಎಕ್ಕಾರು ಇವರ ರಜತ ಸಂಭ್ರಮದ ಪ್ರಯುಕ್ತ ಎ 2 ರಂದು ಸಂಜೆ 5.30 ರಿಂದ ಎಕ್ಕಾರು ಬೋಲೋಡಿ ಮೈದಾನದಲ್ಲಿ ನಡೆಯಲಿದೆ.
ಸಂಜೆ 7.30 ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಾಚನ ನೀಡಲಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಎಂ ಆರ್ ಜಿ ಗ್ರೂಪ್ ನ ಕೆ. ಪ್ರಕಾಶ್ ಶೆಟ್ಟಿ ನೆರವೇರಿಸಲಿದ್ದಾರೆ.
ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ಅವರು ರಜತ ವಿಜಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಕಟೀಲು ದೇವಳದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಎಕ್ಕಾರು ಕೃಷ್ಣ ಮಠದ ಹರಿದಾಸ ಉಡುಪ ಆಶೀರ್ವಾಚನ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಎಕ್ಕಾರು ಶ್ರೀಕೊಡಮಣೆತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವ) ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಉಪಾಧ್ಯಕ್ಷ ಈಶ್ವರ್ ಕಟೀಲ್ ಸಂಸ್ಥೆಯ ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು ಮುಖ್ಯ ಅತಿಥಿಗಳಾಗಿದ್ದಾರೆ.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 5.30 ರಿಂದ ಪಟ್ಲ, ಕನ್ನಡಿಕಟ್ಟೆ, ಪುಣಿಂಚಿತ್ತಾಯ, ರಾಮಕೃಷ್ಣ ಹೆಗ್ಡೆ ಹಿಲ್ಲೂರು ರಿಂದ ಯಕ್ಷಗಾನ ವೈಭವ ನಡೆಯಲಿದೆ.ವಿಜಯ ಯುವ ಸಂಗಮ ಎಕ್ಕಾರು ಮತ್ತು ಸರ್ಕಸ್ ತುಳು ಚಿತ್ರರಂಗದ ಸಹಯೋಗದೊಂದಿಗೆ ಎಕ್ಕಾರ್ ನೈಟ್ಸ್ 2022 ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ನಿಹಾಲ್ ತಾವ್ರೊ, ನಟ ರೂಪೇಶ್ ಶೆಟ್ಟಿ, ಪೈರ್ ರಮೇಶ್ ಚೆನೈ,ಮಾನಸ ಹೊಳ್ಳ ಬೆಂಗಳೂರು , ಸೌಜನ್ಯ ಹೆಗ್ಡೆ, ಚಿತ್ರ ನಟ ಭೋಜರಾಜ್ ವಾಮಂಜೂರು, ಶ್ರೀ ಹರ್ಷ ಮೈಸೂರು , ಪ್ರಕಾಶ್ ಮಹಾದೇವನ್,ರೂಪ ಪ್ರಕಾಶ್, ಕಲಾವತಿ ದಯಾನಂದ್, ಪೊಲ್ಲಾಜಿ ಮುತ್ತು ಕೇರಳ, ವಿಶ್ವಾಸ್ ಗುರುಪುರ, ಮಲ್ಲಿಕಾ ಮಟ್ಟಿ, ರಾಕೇಶ್ ದಿಲ್ಸೆ, ಭಾಗವಹಿಸಲಿದ್ದಾರೆ, ಪ್ರಶಂಸ ಕಾಪು ತಂಡದಿಂದ ಹಾಸ್ಯ ಪ್ರದರ್ಶನ, ಆರ್ಯನ್ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ, ಡ್ಯಾನ್ಸಿಂಗ್ ಸ್ಟಾರ್ ಡ್ಯಾನ್ಸ್ ಆಕಾಡಮಿಯಿಂದ ನೃತ್ಯ ಪ್ರದರ್ಶನ, ಶವರಿ ಚೆಂಡೆಬಳಗ ಮುಲ್ಲಕಾಡ್ ತಂಡದಿಂದ ವೈವಿದ್ಯಮಯ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಆದರ್ಶ್ ಶೆಟ್ಟಿ ಎಕ್ಕಾರು ತಿಳಿಸಿದ್ದಾರೆ.
Kshetra Samachara
31/03/2022 04:36 pm