ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳಕುಂಜೆ: ಗ್ರಾಮೀಣ ಭಾಗದ ಜನರು ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು

ಮುಲ್ಕಿ:ದುರ್ಗಾ ಸಂಜೀವನಿ ಆಸ್ಪತ್ರೆ ವತಿಯಿಂದ ರಾಷ್ಟ್ರ ಸೇವಿಕಾ ಸಮಿತಿ, ಕುಟುಂಬ ಪ್ರಬೋಧನ್ ಬಳಕುಂಜೆ ಹಾಗೂ ವಿಠೋಭ ರುಖುಮಾಯಿ ಮಂದಿರದ ಸಹಯೋಗದಲ್ಲಿ ಬಳಕುಂಜೆ ವಿಠೋಭ ಭಜನಾ ಮಂದಿರದ ಬಳಿ ಕೆಎಂಸಿ ಆಸ್ಪತ್ರೆಯ ಲಾಯಲ್ಟಿ ಕಾರ್ಡ್ ನೊಂದಾವಣೆ ನಡೆಯಿತು.

ದುರ್ಗಾ ಸಂಜೀವನಿ ಆಸ್ಪತ್ರೆಯ ತಾರಾನಾಥ ಶೆಟ್ಟಿ ಮಾತನಾಡಿ ಗ್ರಾಮೀಣ ಭಾಗದ ಜನರು ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಪಂಜಿನಡ್ಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಾಗಭೂಷಣ ರಾವ್, ಭಜನಾ ಮಂದಿರದ ದಯಾನಂದ ಶೆಟ್ಟಿ, ವಿಜಯ ರೈತರ ಸೇವಾ ಸಂಘದ ಪ್ರಸಾದ ಅಜಿಲ, ಶ್ರೀಮತಿ ಮಾಲತಿ ಚಂದ್ರಶೇಖರ ಮತ್ತಿತರರಿದ್ದರು.

Edited By : PublicNext Desk
Kshetra Samachara

Kshetra Samachara

24/03/2022 04:57 pm

Cinque Terre

1.39 K

Cinque Terre

0

ಸಂಬಂಧಿತ ಸುದ್ದಿ