ಕಟೀಲು : ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ಮಂಗಳವಾರ ವರ್ಷಾವಧಿ ನೇಮೋತ್ಸವ ಆರಂಭಗೊಂಡಿತು.
ತೆಂಗಿನ ಗರಿಗಳಿಂದ ಕಟ್ಟಿದ ಒಲಿಮದೆಯೊಳಗಡೆಯೇ ವೇಷ ಹಾಕಿಕೊಳ್ಳುವ ದೈವಪಾತ್ರಿ ಅವೇಶಭರಿತವಾಗಿ ಒಲಿಮದೆ ಒಡೆದು ಹೊರಬರುವ ವಿಶಿಷ್ಟ ಸನ್ನಿವೇಶವನ್ನು ಭಕ್ತರು ಕಣ್ತುಂಬಿಕೊಂಡರು.
ಅರಸು ದೈವಗಳಿಗೆ ಇರುವ ಎತ್ತರವಾದ ವಿಶಿಷ್ಟವಾದ ಮುಡಿಯನ್ನು ಒಲಿಮದೆಯ ಜೊತೆಗೆ ಕಟ್ಟಲಾಗಿರುತ್ತದೆ. ಒಲಿಮದೆಯಿಂದ ಆವೇಶಭರಿತವಾಗಿ ದೈವವು ಹೊರಬಂದ ಬಳಿಕ ಬಟ್ಟೆಯಿಂದ ಅಲಂಕೃತ ಎತ್ತರವಾದ ಮುಡಿಯನ್ನು ಹಿಡಿದುಕೊಂಡು ಅರಸು ಕುಂಜರಾಯ ದೈವದ ನೇಮವು ಶಿಬರೂರು ಕೊಡಮಣಿತ್ತಾಯ, ಮಾಗಂದಡಿ ಕಾಂತೇರಿ ಧೂಮಾವತಿ, ಬಡಗ ಎಕ್ಕಾರು ಜಾರಂದಾಯ, ಮಿತ್ತಬೈಲು ಸರಳ ಧೂಮಾವತಿ ದೈವಗಳ ಸಹಿತ ನಡೆಯುತ್ತದೆ.
ಬಳಿಕ ಐದೂ ದೈವಗಳ ನೇಮೋತ್ಸವ ನಡೆಯುತ್ತದೆ. ಅಲ್ಲದೆ ಶಿಬರೂರು ಉಳ್ಳಾಯ, ಕೊಂಡೇಲ್ತಾಯ, ಮೈಸಂದಾಯ ದೈವಗಳ ಕಟ್ಟುಕಟ್ಟಳೆ ನೇಮವೂ ನಡೆಯಿತು.
Kshetra Samachara
09/03/2022 05:26 pm