ಬಜಪೆ: ರಿಕ್ಷಾ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ರಿಕ್ಷಾ ಚಾಲಕರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 169 ರ ಗುರುಪುರ ಕುಕ್ಕುದ ಕಟ್ಟೆಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.ಘಟನೆಯಲ್ಲಿ ರಿಕ್ಷಾ ಚಾಲಕ ಅಶೋಕ್ ಅವರಿಗೆ ಗಂಭೀರ ಗಾಯವಾಗಿದ್ದು,ಅವರ ಪತ್ನಿಯ ಹಣೆ ಹಾಗೂ ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ.ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಮಂಗಳೂರಿನಿಂದ ಕೈಕಂಬದತ್ತ ಸಾಗುತ್ತಿತ್ತು.ರಿಕ್ಷಾವು ಗುರುಪುರ ಕೊಳದ ಬದಿಯ ಒಳರಸ್ತೆಯ ಮೂಲಕ ಹೆದ್ದಾರಿಯತ್ತ ಸಂಚರಿಸುತ್ತಿತ್ತು.ಈ ವೇಳೆ ಗುರುಪುರ ಸಮೀಪ ಕಾರು ರಿಕ್ಷಾಕ್ಕೆ ಡಿಕ್ಕಿಹೊಡೆದಿದೆ.ಕಾರಿನಲ್ಲಿದ್ದವರು ಮಂಗಳೂರಿನ ಕೋಡಿಕಲ್ ನಿವಾಸಿಗಳು ಎಂದು ತಿಳಿದುಬಂದಿದೆ.
ಬಜಪೆ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು,ತನಿಖೆ ನಡೆಸುತ್ತಿದ್ದಾರೆ.
Kshetra Samachara
04/03/2022 05:45 pm