ಬಜಪೆ : ಎಂಎಲ್‍ಸಿ ಬಿ ಎಂ ಫಾರೂಕ್ ಅವರ ಮೂರು ಲಕ್ಷ ಅನುದಾನದಲ್ಲಿ ಗುರುಪುರ ಕೈಕಂಬ ಕಾನ್ವೆಂಟ್ ಬಳಿ ನಿರ್ಮಾಣಗೊಳ್ಳಲಿರುವ ರಿಕ್ಷಾ ಪಾರ್ಕ್ ಗೆ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಗುರುಪುರ ದಾರೂ ಸಲಾಂ ಜುಮ್ಮಾ ಮಸೀದಿ ಧರ್ಮಗುರು ಜಮಾಲ್ ದಾರಿಮಿ ರಿಕ್ಷಾ ಪಾರ್ಕ್ ನಿರ್ಮಾಣಕ್ಕೆ ಪ್ರಾರ್ಥನೆ ಸಲ್ಲಿಸಿದರು. ಜಿ.ಪಂ ನಿಕಟಪೂರ್ವ ಸದಸ್ಯ ಯು ಪಿ ಇಬ್ರಾಹಿಂ, ಪಂಚಾಯತ್ ಸದಸ್ಯರಾದ ದಾವೂದ್, ಸದಾಶಿವ ಶೆಟ್ಟಿ, ಎ ಕೆ ಅಶ್ರಫ್, ರಿಕ್ಷಾ ಚಾಲಕರು, ಮುಸ್ತಫಾ, ಜಲೀಲ್, ಹಸನ್ ಬಾವ, ಕಾಂಗ್ರೆಸ್ ಮುಖಂಡ ಹರೀಶ್ ಭಂಡಾರಿ, ಗ್ಲಾಡಿಸ್ ಕ್ವಾಡ್ರಸ್, ರಿಕ್ಷಾ ಪಾರ್ಕ್ ಅಧ್ಯಕ್ಷ ಅಬ್ದುಲ್ ರಜಾಕ್ ಹಾಗೂ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.
Kshetra Samachara
15/02/2022 06:27 pm