ಬಜಪೆ: ಒಮಿಕ್ರಾನ್ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇಂದಿನಿಂದ ರಾತ್ರಿ ಕರ್ಪ್ಯೂ ಜಾರಿಗೊಳಿಸಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಯಕ್ಷಗಾನ ಮೇಳಗಳ ಪ್ರದರ್ಶನ ಇಂದು ಅಪರಾಹ್ನ 3.30ಕ್ಕೆ ಚೌಕಿ ಪೂಜೆ ನಡೆದ ಬಳಿಕ ಆರಂಭಗೊಂಡಿತು. ಈ ಯಕ್ಷಗಾನ ಪ್ರದರ್ಶನ ರಾತ್ರಿ 9ರ ತನಕ ಮಾತ್ರ ನಡೆಯಲಿದೆ.
ಈ ಹಿಂದೆ ರಾತ್ರಿ 8.30ಕ್ಕೆ ಚೌಕಿ ಪೂಜೆ ನಡೆದ ನಂತರ ಯಕ್ಷಗಾನ ಆರಂಭಗೊಂಡು ಬೆಳಗ್ಗಿನ ತನಕ ನಡೆಯುತ್ತಿತ್ತು. ರಾಜ್ಯದಲ್ಲಿ ಇಂದಿನಿಂದ ಜಾರಿಗೊಳಿಸಿರುವ ರಾತ್ರಿ ಕರ್ಪ್ಯೂನಿಂದಾಗಿ ಯಕ್ಷಗಾನ ಪ್ರದರ್ಶನಗಳನ್ನು ಕಾಲಮಿತಿಗೊಳಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮೇಳದ ಸಂಚಾಲಕರು ತಿಳಿಸಿದ್ದಾರೆ.
Kshetra Samachara
29/12/2021 01:07 pm