ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆರಾರ: ಶ್ರೀ ಬಲವಾಂಡಿ ದೈವಸ್ಥಾನದ ಬಂಟಕಂಬಕ್ಕೆ ಸಾಂಪ್ರದಾಯಿಕ ಮುಹೂರ್ತ

ಬಜಪೆ:ಪೆರಾರ ಶ್ರೀ ಬಲವಾಂಡಿ ದೈವಸ್ಥಾನದ ನೂತನ ಬಂಟಕಂಬ ನಿರ್ಮಾಣದ ಸಲುವಾಗಿ ಬಂಟಕಂಬದ ಮರ ಕಟಾವಿಗೆ ಸುಳ್ಯ ತಾಲೂಕಿನ ಮಂಡೆಕೋಲುವಿನಲ್ಲಿ ಬುಧವಾರದಂದು ಸಾಂಪ್ರದಾಯಿಕ ಮುಹೂರ್ತ ನಡೆಯಿತು.ಪೆರಾರ ಕ್ಷೇತ್ರದ ಪೆರ್ಗಡೆಯವರಾದ ಗಂಗಾಧರ ರೈ ಮುಂಡಬೆಟ್ಟುಗುತ್ತು ನೇತೃತ್ವದಲ್ಲಿ ಕ್ಷೇತ್ರದ ಬಲವಾಂಡಿ ದೈವದ ಪಾತ್ರಿ ಬಾಲಕೃಷ್ಣ ಶೆಟ್ಟಿ ಅವರು ಮುಹೂರ್ತದ ವಿಧಿಗಳನ್ನು ನೆರವೇರಿಸಿದರು.

ಈ ಸಂದರ್ಭ ಡೆಪ್ಯುಟಿ ತಹಶೀಲ್ದಾರ್ ಶಿವಪ್ರಸಾದ್,ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಶಿವಾಜಿ ಶೆಟ್ಟಿ ಕೊಳಕೆಬೈಲು,ಸಮಿತಿಯ ಸದಸ್ಯರಾದ ಶೇಖರ ಸಪಳಿಗ,ಸುರೇಶ್ ಅಂಚನ್,ಪ್ರಕಾಶ್ ಮಲ್ಲಿ,ಕಾಶಿನಾಥ್ ಕಾಮತ್,ರಮೇಶ್ ಅಮೀನ್,ಸುನೀಲ್ ಪೆರಾರ,ಹರಿಶ್ಚಂದ್ರ ಪಕ್ಕಳ,ರೋಹಿತ್ ಪೆರಾರ,ಶೈಲೇಶ್ ಆಚಾರ್ಯ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

28/10/2021 06:27 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ