ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ ಕ್ಷೇತ್ರದ 4 ಗ್ರಾಪಂಗಳ 4815 ಮನೆಗಳಿಗೆ ನಳ್ಳಿನೀರು ಸಂಪರ್ಕ ಯೋಜನೆ ಅನುಮೋದನೆ

ಬಂಟ್ವಾಳ: ಬಂಟ್ವಾಳ ತಾಲೂಕಿನ 4 ಗ್ರಾಪಂಗಳ 51 ಜನವಸತಿಗಳ 4815 ಮನೆಗಳಿಗೆ ಕಾರ್ಯಾತ್ಮಕ ನಳ್ಳಿನೀರು ಸಂಪರ್ಕ ಒದಗಿಸುವ ಬಗ್ಗೆ ಕಾರ್ಯಯೋಜನೆ ರೂಪಿಸಲಾಗಿದ್ದು, ಇದಕ್ಕೆ ಸಚಿವ ಈಶ್ವರಪ್ಪ ಅನುಮೋದನೆ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ,ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಕುರಿತಾದ ಸಭೆ ಶುಕ್ರವಾರ ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಭಾಗವಹಿಸಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಗ್ರಾಮಗಳಾದ ಅಮ್ಮುಂಜೆ ಗ್ರಾಮದ 1215 ಮನೆಗಳಿಗೆ, ಬಡಗಬೆಳ್ಳೂರು ಗ್ರಾಮದ 823 ಮನೆಗಳಿಗೆ, ತೆಂಕಬೆಳ್ಳೂರು ಗ್ರಾಮದ 315 ಮನೆಗಳಿಗೆ,ಕಳ್ಳಿಗೆ ಗ್ರಾಮದ 1273 ಮನೆಗಳಿಗೆ,ಕರಿಯಂಗಳ ಗ್ರಾಮದ 890 ಮನೆಗಳಿಗೆ ಒಟ್ಟು 4 ಗ್ರಾಪಂನ 51 ಜನ ವಸತಿಗಳ 4815 ಮನೆಗಳಿಗೆ ಕಾರ್ಯಾತ್ಮಕ ನಳ್ಳಿನೀರು ಸಂಪರ್ಕ ಒದಗಿಸುವ ಬಗ್ಗೆ ಕಾರ್ಯಯೋಜನೆ ರೂಪಿಸಲಾಗಿದ್ದು, ಸಚಿವರು ಅನುಮೋದನೆ ನೀಡಿ ತಕ್ಷಣವೇ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ಹಾಗೂ ಮೂಡಬಿದಿರೆ ತಾಲೂಕಿನ ಜಲಜೀವನ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಚಿವರು ಅನುಮೋದನೆ ನೀಡಿದರು. ಗ್ರಾಮೀಣಾಭಿವೃದ್ಧಿ,ಪಂಚಾಯತ್ ರಾಜ್ ಇಲಾಖೆಯ ಸರಕಾರದ ಪ್ರ.ಕಾರ್ಯದರ್ಶಿ ಎಲ್.ಕೆ ಅತಿಕ್, ಗ್ರಾಮೀಣ ಕುಡಿಯುವ ನೀರಿನ ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಇಂಜಿನಿಯರ್ ಹೊಳೆಯಾಜಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

09/10/2020 07:45 pm

Cinque Terre

4.04 K

Cinque Terre

0

ಸಂಬಂಧಿತ ಸುದ್ದಿ