ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಡ್ಡ ಕುಸಿತ: ಗುರುಪುರ ಮಠದಗುಡ್ಡ ಪ್ರದೇಶಕ್ಕೆ ಶಾಸಕ, ಜಿಲ್ಲಾಧಿಕಾರಿ ಭೇಟಿ

ಮುಲ್ಕಿ: ಮಂಗಳೂರು ಹೊರವಲಯದ ಗುರುಪುರ ಮಠದ ಗುಡ್ಡ ಎಂಬಲ್ಲಿ ಕೆಲ ತಿಂಗಳ ಹಿಂದೆ ಗುಡ್ಡಕುಸಿತ ಉಂಟಾದ ಪ್ರದೇಶಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಶನಿವಾರ ಭೇಟಿ ನೀಡಿದರು.

ಸಂತ್ರಸ್ತರಿಗೆ ರಾಜೀವ್ ಗಾಂಧಿ ಹೌಸಿಂಗ್ ಬೋರ್ಡಿನಿಂದ ನೆರವು ಸಿಗುವುದಕ್ಕೆ ಪ್ರಯತ್ನಿಸುವೆ ಮತ್ತು ಸರಕಾರದ ಮಟ್ಟದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿಯವರು ಕೆಲಸ ಮಾಡುತ್ತಿದ್ದಾರೆ ಎಂದು ಡಿ.ಸಿ. ತಿಳಿಸಿದರು.

ಸಂತ್ರಸ್ತರಿಗೆ ಗಂಜಿಮಠ ಗ್ರಾಪಂನ ಮೊಗರು ಗ್ರಾಮದಲ್ಲಿ 1.5 ಎಕರೆ ಹಾಗೂ ಅದೇ ಗ್ರಾಮದ ಮತ್ತೊಂದೆಡೆ 2.5 ಎಕರೆ ಜಾಗ ಗುರುತಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.

ಜಿಪಂ ಸದಸ್ಯ, ತಾಪಂ ಸದಸ್ಯ , ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಉಪತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ ಆಸೀಫ್, ವಿಎ, ಪಿಡಿಒ ಅಬೂಬಕ್ಕರ್, ಬಿಜೆಪಿ ಮುಖಂಡರಾದ ರಾಜೇಶ್ ಸುವರ್ಣ, ಶ್ರೀಕರ ಶೆಟ್ಟಿ, ಸೋಮಯ್ಯ, ನಳಿನಿ ಶೆಟ್ಟಿ, ಸೇಸಮ್ಮ, ಜಲಜಾ ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

31/10/2020 05:17 pm

Cinque Terre

9.34 K

Cinque Terre

0

ಸಂಬಂಧಿತ ಸುದ್ದಿ