ಮುಲ್ಕಿ: ಕಿನ್ನಿಗೋಳಿ ಸಮೀಪದ ಪದ್ಮನೂರು ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಪದ್ಮನೂರು ಸಾರ್ವಜನಿಕ ಯಕ್ಷಗಾನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸರ್ಕಾರದ ವಿವಿಧ ಸವಲತ್ತುಗಳ (ಆಯುಷ್ಮಾನ್ ಕಾರ್ಡ್, ಕಾರ್ಮಿಕ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪಾನ್ ಕಾರ್ಡ್) ಉಚಿತ ನೋಂದಾವಣೆ ಮತ್ತು ವಿತರಣಾ ಕಾರ್ಯಕ್ರಮ ನಡೆಯಿತು.
ಯಕ್ಷಗಾನ ಬಯಲಾಟ ಸಮಿತಿ ಹಂಗಾಮಿ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ, ಹಿರಿಯ ಸದಸ್ಯ ಜೋಸೆಫ್ ಕ್ವಾಡ್ರಸ್, ಕಿನ್ನಿಗೋಳಿ ಸೇವಾ ಸಿಂಧು ಕೇಂದ್ರದ ಅಶೋಕ್ ಶೆಟ್ಟಿಗಾರ್, ಸಮಿತಿಯ ಕೋಶಾಧಿಕಾರಿ ಪ್ರಕಾಶ್ ಡಿಸೋಜ, ವಸಂತ ಶೆಟ್ಟಿಗಾರ್, ಶೇಖರ ಪೂಜಾರಿ, ಮೆಲಿಟಾ ಡಿಸೋಜ, ವಿಶ್ವನಾಥ ಶೆಟ್ಟಿ ಮತ್ತಿತರಿದ್ದರು. ಸುಮಾರು 150 ಮಂದಿ ಜನರು ಯೋಜನೆಯ ಪ್ರಯೋಜನ ಪಡೆದರು.
Kshetra Samachara
25/01/2021 11:58 am