ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ವಿಜೃಂಭಣೆಯ ಹುಲಿವೇಷ ಮೆರವಣಿಗೆ

ಕಟೀಲು:ನವರಾತ್ರಿ ಮಹೋತ್ಸವದ ಪ್ರಯುಕ್ತ ಕೊಡೆತ್ತೂರಿನಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಪ್ರದಾಯದಂತೆ ನವರಾತ್ರಿಯ ಹುಲಿವೇಷ ಮೆರವಣಿಗೆ ನಡೆಯಿತು.

ಪ್ರತೀ ವರ್ಷ ನವರಾತ್ರಿಯ ಲಲಿತಪಂಚಮಿಯಂದು ಹುಲಿವೇಷ ಮೆರವಣಿಗೆ ನಡೆಯುತ್ತಿದ್ದು, ಕಳೆದ 58 ವರ್ಷಗಳಿಂದ ಈ ಸಂಪ್ರದಾಯ ನಡೆಯುತ್ತಿದೆ, ಇಲ್ಲಿ ಹುಲಿವೇಷ ಅಂದರೆ ಕೇವಲ ‌ಮನರಂಜನೆಗೆ‌ಮಾತ್ರ ಸೀಮಿತವಾಗಿರದೆ ಧಾರ್ಮಿಕ ನಂಬಿಕೆಯನ್ನು ಒಳಗೊಂಡಿದೆ,

ಕೊಡೆತ್ತೂರಿನ ಮೂಡುಮನೆಯಿಂದ ವಿಶೇಷ ಪ್ರಾರ್ಥನೆಯ ನಡೆದು ಮನೆಯ ಮುಂಭಾಗ ಕುಣಿದು ನಂತರ ಮೆರವಣಿಗೆಗೆ ಚಾಲನೆ ಸಿಗುತ್ತದೆ, ಮೆರವಣಿಗೆಯಲ್ಲಿ ಹುಲು ವೇಷ ಮಾತ್ರವಲ್ಲದೆ ವಿವಿಧ ವೇಷಗಳು ಸಾಥ್ ನೀಡುತ್ತದೆ.

ಮರವಣಿಗೆ ಕಟೀಲು ದೇವಳದವರೆಗೆ ನಡೆದು ಅಲ್ಲಿ ಕುಣಿದು ನಂತರ ಪ್ರಸಾದ ಸ್ವೀಕರಿಸಿ ಮೆರವಣಿಗೆ ಮುಕ್ತಾಯವಾಗುತ್ತದೆ,

ಹುಲಿವೇಷದಲ್ಲಿ ವೇಷ ಹಾಕುವ ಹೆಚ್ಚಿನ ಜನರು ಹರಕೆಯನ್ನು ಹೊತ್ತು ವೇಷ ಹಾಕುತ್ತಾರೆ, ಕೆಲವರು ಪ್ರತೀ ವರ್ಷ ಹಾಕುವುದು ಮಾತ್ರವಲ್ಲದೆ ಹೊರ ದೇಶ ರಾಜ್ಯದಲ್ಲಿದ್ದರು ಳಿತ ಪಂಚಮಿ ದಿನ ಇಲ್ಲಿಗೆ ಬಂದು ವೇಷ ಹಾಕಿ ಹರಕೆ ಸಲ್ಲಿಸುತ್ತಾರೆ.

Edited By : PublicNext Desk
Kshetra Samachara

Kshetra Samachara

01/10/2022 09:01 pm

Cinque Terre

2.08 K

Cinque Terre

0

ಸಂಬಂಧಿತ ಸುದ್ದಿ