ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:"ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಸರ್. ಎಂ ವಿಶ್ವೇಶ್ವರಯ್ಯನವರು"

ಮಂಗಳೂರು:ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಮೂಲ ಕಾರಣರಾಗಿ ಕನ್ನಡ ನಾಡಲ್ಲಿ ಕನ್ನಡದ ಕಂಪನ್ನು ಪಸರಿಸುವಲ್ಲಿ ಸರ್. ಎಂ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿದೆ. ಅವರ ದೂರದರ್ಶಿತ್ವ ಮತ್ತು ಮುತ್ಸದ್ದಿತನದ ಪರಿಣಾಮವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಕಾರಣವಾಯಿತು. ಅಂತಹಾ ಮಹಾನ್ ಚೇತನ ಎಂ ವಿಶ್ವೇಶ್ವರಯ್ಯ ರವರನ್ನು ನಾವು ಪ್ರತಿ ನಿತ್ಯ ಸ್ಮರಿಸಿಕೊಳ್ಳಬೇಕು ಮತ್ತು ಅವರು ಹಾಕಿದ ದಾರಿಯಲ್ಲಿ ಅವರ ಆದರ್ಶಗಳನ್ನು ಮೇಳೈಸಿಕೊಂಡು ಬದುಕಿದಲ್ಲಿ ಕನ್ನಡ ಬಾವುಟ ಬಾನೆತ್ತರಕ್ಕೆ ಹಾರುವುದರಲ್ಲಿ ಸಂಶಯವೇ ಇಲ್ಲ ಎಂದು ಕಿಟ್ಟಲ್ ಪ್ರೌಢಶಾಲೆ ಗೋರಿಗುಡ್ಡೆ ಇದರ ಅಧ್ಯಾಪಕರಾದ ಕೃಷ್ಣ ನೀರಮೂಲೆ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್, ಮಂಗಳೂರು ಘಟಕದ ವತಿಯಿಂದ ನಗರದ ಹಂಪನಕಟ್ಟೆಯಲ್ಲಿರುವ ಮಾಂಡವಿ ಮೋಟಾರ್ ಕಚೇರಿಯ ಸಭಾಂಗಣದಲ್ಲಿ ಸರ್. ಎಂ ವಿಶ್ವೇಶ್ವರಯ್ಯ ಜಯಂತಿಯ ಸಂದರ್ಭದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕ. ಸಾ. ಪ ದಕ್ಷಿಣ ಕನ್ನಡ ಜೆಲ್ಲೆ ಇದರ ಅಧ್ಯಕ್ಷರಾದ ಡಾ|| ಎಂ. ಪಿ ಶ್ರೀನಾಥ್ ಅವರು ಮಾತನಾಡಿದರು.

ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಡಾ|| ಮುರಲೀ ಮೋಹನ್ ಚೂಂತಾರು, ಗಣೇಶ್ ಪ್ರಸಾದ್ ಕೋಶಾಧಿಕಾರಿ ಸುಬ್ರಾಯ ಭಟ್ ಮತ್ತಿತರರು ಉಪಸ್ಥಿತರಿದ್ದರು

.

Edited By : PublicNext Desk
Kshetra Samachara

Kshetra Samachara

16/09/2022 07:28 pm

Cinque Terre

1.93 K

Cinque Terre

0

ಸಂಬಂಧಿತ ಸುದ್ದಿ