ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಭಕ್ತಿ ಭಾವದ ಸೌರ ಋಗುಪಕರ್ಮ ಆಚರಣೆ

ಮುಲ್ಕಿ: ಮುಲ್ಕಿ ಪರಿಸರ ದೇವಸ್ಥಾನಗಳಲ್ಲಿ ಸೌರ ಋಗುಪಕರ್ಮ ಆಚರಣೆ ಭಕ್ತಿಭಾವದಿಂದ ನಡೆಯಿತು.

ಮುಲ್ಕಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಪುರೋಹಿತರಾದ ವಿಷ್ಣುಮೂರ್ತಿ ಆಚಾರ್ಯ ಹಾಗೂ ಅರ್ಚಕ ಶಶಾಂಕ್ ಮುಚ್ಚಿಂತಾಯ ನೇತೃತ್ವದಲ್ಲಿ ಹೋಮಗಳು ನಡೆದು ಯಜ್ಞೋಪವೀತ ಧಾರಣೆ ಕಾರ್ಯಕ್ರಮ ನಡೆಯಿತು.

ಬಳಿಕ ವಿಶೇಷ ಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ದೇವ ಪ್ರಸಾದ್ ಪುನರೂರು, ವಿಪರ ಸಂಪದದ ಅಧ್ಯಕ್ಷ ಸುಧಾಕರ್ ರಾವ್,ವಿಶ್ವನಾಥ ರಾವ್, ಗೋಪಿನಾಥ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಮುಲ್ಕಿ ಪರಿಸರದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪಾವಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನ, ಕಿನ್ನಿಗೋಳಿ,ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಸೌರ ಋಗುಪಕರ್ಮ ಆಚರಣೆ ವಿಜೃಂಭಣೆಯಿಂದ ನಡೆಯಿತು.

Edited By : PublicNext Desk
Kshetra Samachara

Kshetra Samachara

08/09/2022 11:15 am

Cinque Terre

966

Cinque Terre

0

ಸಂಬಂಧಿತ ಸುದ್ದಿ