ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಚೈತನ್ಯ ಮಹಿಳಾ ಮಂಡಳಿಯ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮ

ಬಜಪೆ: ಚೈತನ್ಯ ಮಹಿಳಾ ಮಂಡಳಿ ಮುರನಗರ ಬಜಪೆ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವು ನಡೆಯಿತು.ಸ್ಥಳೀಯ ಹಿರಿಯರಾದ ವಾಸು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಕುಡುತ್ತ ಚಟ್ನಿ,ತೊಜಂಕ್ ಸುಕ್ಕ,ಕುಕ್ಕುದ ಚಟ್ನಿ,ಪೆಲಕಾಯಿ,ತೊಜಂಕ್ ಬಜೆ, ಗಾರ್ಯ, ತೇಟ್ಲ, ಉಪ್ಪಡ್ ಪಚ್ಚಿರ್, ಗುಜ್ಜೆ, ಪತ್ರೊಡೆ, ಮಂಜಲ್ದದ ಇರೆತ್ತ ಗಟ್ಟಿ, ಅಂಬಡೆಗಸಿ, ಲಾಂಬು ಪದೆಂಗಿ ಗಸಿ, ಕನಿಲೆಪದೆಂಗಿ, ಪುಂಡಿ, ನುಪ್ಪು, ಸಾರ್ನಡ್ಯೆ ಹಾಗೂ ಕುಡುತ್ತ ಸಾರ್ ಮುಂತಾದ ತುಳುನಾಡಿನ ಖಾದ್ಯ, ತಿಂಡಿ ತಿನಿಸುಗಳು ಎಲ್ಲರ ಗಮನಸೆಳೆದವು.

ವೇದಿಕೆಯಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ರಂಗಪ್ಪ, ಗೌರವಾಧ್ಯಕ್ಷೆ ಜಯಂತಿ ಗಂಗಾಧರ್, ಕಂದಾವರ ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಲೀಲಾ ವಾಸು, ಮಂಡಳಿಯ ಸರ್ವ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/07/2022 05:51 pm

Cinque Terre

1.56 K

Cinque Terre

0

ಸಂಬಂಧಿತ ಸುದ್ದಿ