ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಕರಾವಳಿಯಲ್ಲಿ ಮಳೆ ನಡುವೆಯೂ ಈದ್ ಸಂಭ್ರಮ

ಮುಲ್ಕಿ: ಕರಾವಳಿಯಾದ್ಯಂತ ಮುಸ್ಲಿಮ್ ಬಾಂಧವರು ಇಂದು ಸಂಭ್ರಮದಿಂದ ಈದುಲ್ ಅಝ್ಹಾ ಹಬ್ಬವನ್ನು ಆಚರಿಸುತ್ತಿದ್ದಾರೆ.

ಬೆಳಿಗ್ಗೆಯೇ ತಕ್ಬೀರ್ ಘೋಷ ವಾಕ್ಯದ ಜೊತೆಗೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಕಿನ್ನಿಗೋಳಿ ಇಲ್ಲಿನ ಗುತ್ತಕಾಡು ಶಾಂತಿನಗರ ಖಿಲ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ನಮಾಝ್ ನಡೆಯಿತು. ನಮಾಝ್ ಹಾಗೂ ಈದ್ ಖುತುಬಾವನ್ನು ಉಮರುಲ್ ಫಾರೂಕ್ ಸಖಾಫಿ ನೆರವೇರಿಸಿದರು. ಬಳಿಕ ಮುಸ್ಲಿಮ್ ಬಾಂಧವರೆಲ್ಲರೂ ಪರಸ್ಪರ ಹಸ್ತಲಾಘವ ಮಾಡಿ, ಶುಭಾಶಯ ವಿನಿಮಯ ಮಾಡಿಕೊಂಡರು.

ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಕೊಂಚ ಬಿಡುವು ಕೊಟ್ಟಿರುವ ಹಿನ್ನೆಲೆ ಮುಸ್ಲಿಂ ಬಾಂಧವರ ಸಂಭ್ರಮ ಹೆಚ್ಚಿಸಿದೆ.

ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

10/07/2022 03:19 pm

Cinque Terre

2.59 K

Cinque Terre

0

ಸಂಬಂಧಿತ ಸುದ್ದಿ