ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆಕಾಡು: "ಭಕ್ತಿಯ ಭಜನೆ ಮೂಲಕ ಸಕಲ ಇಷ್ಟಾರ್ಥ ಸಿದ್ದಿ"

ಮುಲ್ಕಿ: ಮುಲ್ಕಿ ಸಮೀಪದ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಅಷ್ಟಾವಧಾನ ಕಾರ್ಯಕ್ರಮದ ನಿಮಿತ್ತ ಭಜನಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಹೊಯಿಗೆಗುಡ್ಡೆ ಉಮಾಮಹೇಶ್ವರ ಚಿಕ್ಕ ಮೇಳದ ವತಿಯಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಭೇಟಿ ನೀಡಿದರು. ಈ ಸಂದರ್ಭ ಭಜನಾ ಮಂದಿರದ ಅರ್ಚಕ ರಾಘವೇಂದ್ರ ರಾವ್ ಹಾಗೂ ಅಧ್ಯಕ್ಷ ಸಂದೀಪ್ ಕುಮಾರ್,ಮುರಳಿ ರಾವ್ ರವರು ಸ್ವಾಮಿಜಿ ರವರನ್ನು ವಿಶೇಷವಾಗಿ ಸ್ವಾಗತಿಸಿ ಮಂದಿರದ ವತಿಯಿಂದ ಪ್ರಸಾದ ನೀಡಿ ಗೌರವಿಸಿದರು.

ಈ ಸಂದರ್ಭ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಭಜನೆ ದೇವರನ್ನು ಒಲಿಸುವ ಉತ್ತಮ ಸೇವೆಯಾಗಿದ್ದು ಸಕಲ ಇಷ್ಟಾರ್ಥ ಸಿದ್ಧಿಯಾಗಲಿ ಹಾಗೂ ಮಂದಿರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಶ್ರೀ ಶ್ರೀ ಚಂದ್ರಶೇಖರಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ಮಾತೃಶ್ರೀ ಶಾರದಮ್ಮ, ರಾಜೇಶ್ ಭಟ್, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ, ಮಂದಿರದ ಪದಾಧಿಕಾರಿಗಳಾದ ಮಾಧವ ಶೆಟ್ಟಿಗಾರ, ಪವನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಜೂ.10ರಂದು ಅಷ್ಟಾವಧಾನ ಸಮಾರೋಪ ನಡೆಯಲಿದ್ದು ತಾಳಿಪಾಡಿ ಶ್ರೀ ಶನಿಕಥಾ ಸಂಕೀರ್ತನಾ ಮಂಡಳಿ ವತಿಯಿಂದ ಶನಿ ಕಥೆ ಹಾಗೂ ವಿಶೇಷ ಪೂಜೆ ನಡೆಯಲಿದೆ.

Edited By : PublicNext Desk
Kshetra Samachara

Kshetra Samachara

09/07/2022 09:18 am

Cinque Terre

2.62 K

Cinque Terre

0

ಸಂಬಂಧಿತ ಸುದ್ದಿ