ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತೆಂಕು ತಿಟ್ಟು ಯಕ್ಷನಾಟ್ಯ ತರಗತಿಗೆ ಚಾಲನೆ ನೀಡಲಾಯಿತು
ದೇವಸ್ಥಾನದ ಆಡಳಿತ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ ಕಾರ್ಯಕ್ರಮವನ್ನ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಯಕ್ಷನಾಟ್ಯ ತರಗತಿ ಮೂಲಕ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ನಡೆಯುವ ಶಿಬಿರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಅರ್ಚಕ ನರಸಿಂಹ ಭಟ್,,ಉದ್ಯಮಿ ಜೀವನ್ ಕೆ ಶೆಟ್ಟಿ, ಯಕ್ಷಗಾನ ಕಲಾವಿದರಾದ ವಿಜಯ ಕುಮಾರ್ ಶೆಟ್ಟಿ ಮೈಲೊಟ್ಟು ಗಣೇಶ್ ಭಟ್ ನೆಕ್ಕರೆ ಮೂಲೆ, ಬಪ್ಪನಾಡು ಮೇಳದ ವ್ಯವಸ್ಥಾಪಕ ವಿನೋದ್ ಕುಮಾರ್ ಬಜ್ಪೆ, ಮ್ಯಾನೇಜರ್ ಭವಾನಿ ಶಂಕರ್, ಸ್ತ್ರೀ ವೇಷದಾರಿ ಪರಮೇಶ್ವರ ಗಂಗನಾಡು, ರಾಕೇಶ್ ರೈ ಮತ್ತಿತರರು ಉಪಸ್ಥಿತರಿದ್ದರು. ಕಲಾವಿದ ಮಾದವ ಬಂಗೇರ ಕೊಳತ್ತಮಜಲು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಯಕ್ಷ ನಾಟ್ಯ ತರಗತಿ ಶಿಬಿರ ನಡೆಸಿಕೊಡುವ ಕಲಾವಿದ ರಾಕೇಶ್ ರೈ ಆಡ್ಕ ರವರನ್ನು ಗೌರವಿಸಲಾಯಿತು.
ಪ್ರತಿ ಆದಿತ್ಯವಾರ ಮಧ್ಯಾಹ್ನ 1.30ರಿಂದ 2.30 ರ ವರೆಗೆ ಕ್ಷೇತ್ರದಲ್ಲಿ ತರಗತಿ ನಡೆಯಲಿದೆ.
Kshetra Samachara
06/07/2022 12:49 pm