ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂ.26:ಮುಲ್ಕಿ ರೋಟರಿ ಕ್ಲಬ್ ರಜತ ಮಹೋತ್ಸವ ಸಂಭ್ರಮ ; ಸಾಧಕರಿಗೆ ಗೌರವ

ಮುಲ್ಕಿ: 25 ವರ್ಷಗಳನ್ನು ಪೂರ್‍ಯೆಸಿರುವ ಮುಲ್ಕಿ ರೋಟರಿ ಕ್ಲಬ್ಬಿನ ರಜತ ಮಹೋತ್ಸವ ಸಂಭ್ರವು ಜೂ26 ರ ಆದಿತ್ಯವಾರ ಸಂಜೆ 4 ಗಂಟೆಗೆ ಬಪ್ಪನಾಡು ದೇವಳದ ಜ್ಞಾನ ಮಂದಿರದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್ ಜಿ ಅಮೀನ್ ಹೇಳಿದರು.

ಮುಲ್ಕಿ ರೋಟರಿ ಶತಾಬ್ದಿ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಜತ ಮಹೋತ್ಸವದ ಅಂಗವಾಗಿ ಸುಮಾರು 5 ಲಕ್ಷ ವೆಚ್ಚದಲ್ಲಿ ದಾನಿಗಳ ಸಹಕಾರದಿಂದ ಬಪ್ಪನಾಡು ದೇವಳದ ಬಳಿ ನಿರ್ಮಿಸಲಾದ ಜಯ ಸಿ ಸುವರ್ಣ ಸ್ಮಾರಕ ರೋಟರಿ ಚಿಲ್ದ್ರನ್ ಪಾರ್ಕ್‌ನ ಉದ್ಘಾಟನೆ ಹಾಗೂ ಇಂಟರಾಕ್ಟ್ ಕ್ಲಬ್ ಗಳ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ರೋಟರಿ ಕ್ಲಬ್ ನ ಅಧ್ಯಕ್ಷ ಶಿವರಾಮ್ ಜಿ ಅಮೀನ್ ವಹಿಸಲಿದ್ದು ಕಾರ್ಯಕ್ರಮವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ರಜತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ,ಮಂಗಳೂರು ವಿ ವಿ ಗೌರವ ಡಾಕ್ತರೇಟ್ ಪಡೆದಿರುವ ಡಾ.ಹರಿಕೃಷ್ಣ ಪುನರೂರು,ಚಿಲ್ದ್ರನ್ ಪಾರ್ಕ್‌ನ ಪ್ರಾಯೋಜಕ ಸೂರ್ಯಕಾಂತ್ ಜೆ ಸುವರ್ಣ,ತುಳು ಚಿತ್ರ ನಟ ಭೋಜರಾಜ್ ವಾಮಂಜೂರುರನ್ನು ಸನ್ಮಾನಿಸಲಾಗುವುದು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳಾದ ಅಕ್ಷತಾ ಕಾಮತ್,ವೀಕ್ಷಾ ವಿ ಶೆಟ್ಟಿ ಮತ್ತು ವಿಷ್ಣು ಎಚ್ ರನ್ನು ಗೌರವಿಸಲಾಗುವುದು ಎಂದು

ರೋಟರಿಯ ರಜತ ಮಹೋತ್ಸವ ಸಮಿತಿಯ ಚೇರ್ಮನ್ ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ರವಿಚಂದ್ರ,ಕೋಶಾಧಿಕಾರಿ ರೇಮಂಡ್ ರೆಬೆಲ್ಲೋ,ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳಾದ ಜಿನ್ ರಾಜ್ ಸಾಲ್ಯಾನ್,ಎಂ ನಾರಾಯಣ,ಜೋವಿನ್ ಪ್ರಕಾಶ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/06/2022 07:59 pm

Cinque Terre

2.32 K

Cinque Terre

0

ಸಂಬಂಧಿತ ಸುದ್ದಿ