ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಕಳ: ಶಿಶುಕಾವ್ಯ ಶಿಬಿರ

ಮುಲ್ಕಿ : ಬಾಳೆಯ ತೋಟದ ಪಕ್ಕದ ಕಾಡೊಳು... ಮೊಲದ ಮರಿ ಮೊಲದ ಮರಿ ಆಡ ಬಾರೆ... ಇಂತಹ ಖ್ಯಾತ ಸಾಹಿತಿಗಳಾದ ಜಿ.ಪಿ. ರಾಜರತ್ನಂ, ಕಯ್ಯಾರ ಕಿಞ್ಞಣ್ಣ ರೈ, ಮಚ್ಚಿಮಲೆ ಶಂಕರನಾರಾಯಣ ರಾವ್, ಕೆಮ್ತೂರು ದೊಡ್ಡಣ್ಣ ಶೆಟ್ಟಿ ಮುಂತಾದವರ ಶಿಶು ಗೀತೆಗಳನ್ನು ಅಭಿನಯ,ರಾಗ, ತಾಳ, ಅರ್ಥವಿವರಣೆ ಸಹಿತ ಮಕ್ಕಳಿಗೆ ಕಲಿಸಿಕೊಡುವ ವಿಶಿಷ್ಟ ಕಾರ್ಯಕ್ರಮವನ್ನು ಕಿನ್ನಿಗೋಳಿ ಸಮೀಪದ ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಮೂಲ್ಕಿ ತಾಲೂಕು ಘಟಕದಿಂದ ಆಯೋಜಿಸಲಾಯಿತು.

ಸಾಹಿತ್ಯ ಪರಿಷತ್ ಅಧ್ಯಕ್ಷೆ ಗಾಯತ್ರೀ ಎಸ್ ಉಡುಪ ಗೀತೆಗಳನ್ನು ಮಕ್ಕಳಿಂದ ಹಾಡಿಸಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜೊಸ್ಸಿ ಪಿಂಟೋ. ಮುಖ್ಯ ಶಿಕ್ಷಕಿ ಫೆಲ್ಸಿ ಡಿಸೋಜ. ಎಸ್ ಡಿಎಂಸಿ ಅಧ್ಯಕ್ಷೆ ಶ್ರೀಮತಿ ಲತಾ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/06/2022 04:12 pm

Cinque Terre

1.75 K

Cinque Terre

0

ಸಂಬಂಧಿತ ಸುದ್ದಿ