ಮುಲ್ಕಿ:ಮುಲ್ಕಿ ಯುವವಾಹಿನಿ ಘಟಕ ಪ್ರಸ್ತುತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಭರತೇಶ್ ಅಮೀನ್ ಮಟ್ಟು ವಹಿಸಿದ್ದರು.
ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಅಮೀನ್ ಮಟ್ಟು ನೆರವೇರಿಸಿ ಮಾತನಾಡಿ ಮುಲ್ಕಿ ಯುವವಾಹಿನಿ ತಂಡ ಉತ್ತಮ ಸಾಮಾಜಿಕ ಕಾರ್ಯಗಳ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸವಲತ್ತುಗಳನ್ನು ದೊರಕಿಸಲು ಕ್ರಿಯಾಶೀಲರಾಗಿದ್ದು ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಭಾರತ್ ಬ್ಯಾಂಕಿನ ನಿವೃತ್ತ ಉಪ ಮಹಾ ಪ್ರಬಂಧಕ ಮೋಹನ್ ದಾಸ್ ಹೆಜಮಾಡಿ, ಕುಳಾಯಿ ಫೌಂಡೇಶನ್ ನ ಅಧ್ಯಕ್ಷೆ ಪ್ರತಿಭಾ ಕುಳಾಯಿ,ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಕೆ ಅಮೀನ್ ಕೊಕ್ಕರ್ ಕಲ್,ಮುಲ್ಕಿ ಯುವವಾಹಿನಿ ಘಟಕದ ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್ ಹಾಗೂ ನೂತನ ಅಧ್ಯಕ್ಷ ಭಾರತಿ ಭಾಸ್ಕರ ಕೋಟ್ಯಾನ್, ಕಾರ್ಯದರ್ಶಿ ಜಾಹ್ನವಿ ಮೋಹನ್ ಸುವರ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ನಾರಾಯಣಗುರು ಎಸೆಸೆಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳಾದ ವಿನಿತ್ ಸುವರ್ಣ ಮುಲ್ಕಿ, ಹಳೆಯಂಗಡಿ ಕೊಳುವೈಲು ನ ಧನ್ಯ ರವರನ್ನು ಗೌರವಿಸಲಾಯಿತು.ವಿದ್ಯಾರ್ಥಿ ವೇತನ ಹಾಗೂ ಸಹಾಯ ಹಸ್ತ, ನೀಡಲಾಯಿತು .
Kshetra Samachara
14/06/2022 07:43 pm