ಮುಲ್ಕಿ: ಜೆಸಿಐ ಮುಲ್ಕಿ ಶಾಂಭವಿ ಹಾಗೂ ಕಾರ್ನಾಡು ಅಂಗನವಾಡಿ ಕೇಂದ್ರದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾರ್ನಾಡು ಸಮುದಾಯ ಭವನದ ಬಳಿ "ಜೆಸಿಐ ಉದ್ಯಾನವನ-ಗೋ ಗ್ರೀನ್ 2022"ಲೋಕಾರ್ಪಣೆ ಯನ್ನು ಜೆಸಿಐ ವಲಯಾಧ್ಯಕ್ಷ ರೋಯನ್ ಉದಯ್ ಕ್ರಾಸ್ತ ನೆರವೇರಿಸಿದರು.
ಈ ಸಂದರ್ಭ ಅವರು ಮಾತನಾಡಿ ಪರಿಸರ ಸಂರಕ್ಷಣೆಯ ಧ್ಯೇಯದ ಮೂಲಕ ಅನೇಕ ಜನಹಿತ ಕಾರ್ಯಗಳನ್ನು ನಡೆಸುತ್ತಿರುವ ಜೆಸಿಐ ಮುಲ್ಕಿ ಶಾಂಭವಿ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಜೆಸಿ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಜೆಸಿಐ ಅಧ್ಯಕ್ಷ ಕಲ್ಲಪ್ಪ ತಡವಲಗ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ನಪಂ ಅಧ್ಯಕ್ಷ ಸುಭಾಶ್ ಶೆಟ್ಟಿ, ಸದಸ್ಯ ಪುತ್ತುಬಾವ,ಮುಖ್ಯಾಧಿಕಾರಿ ಚಂದ್ರಪೂಜಾರಿ, ವಲಯ ಅಧಿಕಾರಿ ವೆಂಕಟೇಶ ಹೆಬ್ಬಾರ್, ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಲ್ಕಿ ವಲಯದ ಮೇಲ್ವಿಚಾರಕಿ ಸುಲೋಚನ ಕಾರ್ಯದರ್ಶಿ ವಿಶ್ವನಾಥ ಶೆಣೈ, ಕಾರ್ಯಕ್ರಮ ನಿರ್ದೇಶಕಿ ಮಂಜುಳಾ ಕಲ್ಲಪ್ಪ ತಡವಲಗ, ಜೂನಿಯರ್ ಜೆಸಿ ಅಧ್ಯಕ್ಷೆ ಯಶಾ ಡಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/06/2022 12:09 pm