ಮುಲ್ಕಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೂಲ್ಕಿ ತಾಲೂಕು ಕಚೇರಿ ವತಿಯಿಂದ ಜರಗಿದ ಕಾರ್ಯಕ್ರಮದಲ್ಲಿ ಮೂಲ್ಕಿ ತಾಲೂಕು ತಹಶೀಲ್ದಾರ್ ಜಿ ಟಿ ಗುರುಪ್ರಸಾದ್ ರವರು ಮೂಲ್ಕಿ ತಾಲೂಕು ಕಚೇರಿ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭ ಅವರು ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಗಿಡಗಳನ್ನು ನೆಟ್ಟು ಪೋಷಿಸಿ ಸಂರಕ್ಷಣೆ ಮಾಡುವ ಮೂಲಕ ಪರಿಸರ ಪ್ರೇಮಿಯಾಗಿ ಎಂದರು.
ಉಪ ತಹಶೀಲ್ದಾರ್ ದಿಲೀಪ್ ರೋಡ್ಕರ್,ಪೂರ್ಣೀಮಾ,ಕಂದಾಯ ನಿರೀಕ್ಷಕ ಜಿ ಎಸ್ ದಿನೇಶ್,ತಾಲೂಕು ಕಚೇರಿ ಸಿಬಂದಿಗಳು ಉಪಸ್ಥಿತರಿದ್ದರು
Kshetra Samachara
06/06/2022 09:01 pm