ಮುಲ್ಕಿ: ಮಕ್ಕಳಿಗೆ ಆಸ್ತಿಯನ್ನು ಮಾಡಿ ಇಡುವ ಬದಲು ಮಕ್ಕಳಿಗೆ ಉತ್ತಮ ಸಂಸ್ಕಾರಯುತವಾದ ಶಿಕ್ಷಣ ನೀಡಿ ಸುಸಂಸ್ಕೃತರನ್ನಾಗಿ ಅವರನ್ನೆ ಅಸ್ತಿಯನ್ನಾಗಿ ಮಾಡಬೇಕು ಎಂದು ಧಾರ್ಮಿಕ ಮುಖಂಡ ಪಂಜ ವಾಸುದೇವ ಭಟ್ ಹೇಳಿದರು.
ಅವರು ಪಕ್ಷಿಕೆರೆ ಸಮೀಪದ ಪಂಜ -ಕೊಯಿಕುಡೆ ಯುವಕ ಮಂಡಲದ ಸಭಾಭವನದಲ್ಲಿ ಪಂಜ ಕೊಯಿಕುಡೆ ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲ ( ರಿ ) ಹಾಗೂ ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲದ ಆಶ್ರಯದಲ್ಲಿ ಹರಿಪಾದೆ ಭಂಡಾರ ಮನೆ ದಿ. ಲಚ್ಚಣಿ ನಾರಾಯಣ ಪೂಜಾರಿ ಸ್ಮರಣಾರ್ಥ ಸ್ಥಳೀಯ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಗ್ರಾಮದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಭಿನಂಧನಾ ಕಾರ್ಯಕ್ರಮ , ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಸ್ಥಳೀಯ ಸಾಧಕ ವಿದ್ಯಾರ್ಥಿಗಳಾದ ಮನ್ವಿತ್ , ಪೂಜಾ ಆರ್ ಶೆಟ್ಟಿ , ಅನಿರುದ್ಧ ಪಿ ರಾವ್ , ಅಮಿತೇಶ್, ಮನೀಷ್, ಅಶಿಫಾ, ಹರ್ಷಿತಾ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರದಡಿಯಲ್ಲಿ ಗೌರವಿಸಲಾಯಿತು.
ಸ್ಥಳೀಯ ಪಂಜ ಕೊಯಿಕುಡೆ ಸರಕಾರಿ ಪ್ರಾಥಮಿಕ ಶಾಲೆಗೆ ಎರಡು ಕುಡಿಯುವ ನೀರಿನ ಡ್ರಮ್ ನೀಡಲಾಯಿತು. ಅರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಆಹಾರ ಕಿಟ್ ನೀಡಲಾಯಿತು. 100 ಕ್ಕೂ ಮಿಕ್ಕಿ ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ನೀಡಲಾಯಿತು.
ಮುಂಬಯಿ ಉದ್ಯಮಿ ಪ್ರಕಾಶ್ ಶೆಟ್ಟಿ ನಲ್ಯಗುತ್ತು , ಕೆಮ್ರಾಲ್ ಗ್ರಾ ಪಂ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಉಪಾಧ್ಯಕ್ಷ ಸುರೇಶ್ ದೇವಾಡಿಗ, ಗ್ರಾ ಪಂ. ಸದಸ್ಯೆರೇವತಿ ಶೆಟ್ಟಿಗಾರ್ , ಅಶ್ವಿನ್ ಶೇಕ್ ಕುಡುಂಬೂರು, ಶಾಲಾ ಮುಖ್ಯ ಶಿಕ್ಷಕಿ ವೀಣಾ ಕುಮಾರಿ, ಹರಿಪಾದೆ ಮಾಧವ ಕೋಟ್ಯಾನ್,ಯುವಕ ಮಂಡಲದ ಅಧ್ಯಕ್ಷ ಅನಿಲ್ ಅಮೀನ್, ಮಾಜಿ ಅಧ್ಯಕ್ಷ ಸುಬ್ರಮಣ್ಯ ಭಟ್, ನವೀನ್ ಶೆಟ್ಟಿ ನಲ್ಯ ಗುತ್ತು, ಮಹಿಳಾ ಮಂಡಲದ ಸರೀತಾ ಆರ್ ಶೆಟ್ಟಿ, ಯುವಕ ಮಂಡಲದ ಕಾರ್ಯದರ್ಶಿ ನವೀನ್ ಕುಮಾರ್ ಹಾಗೂ ಯುವಕ ಹಾಗೂ ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
ಯುವತಿ ಮಂಡಲದ ಸರಿತಾ ಆರ್. ಶೆಟ್ಟಿ ವಂದಿಸಿದರು. ವಿಶಾಲಾಕ್ಷಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
30/05/2022 02:09 pm