ಮುಲ್ಕಿ: ಕಲೆಯ ಪ್ರಕಾರಗಳನ್ನು ಉಳಿಸಿ ಬೆಳೆಸುವ ಕಾಯಕ ಮಾಡುವವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದಾಗ ಕಲೆಗೆ ಬೆಲೆ ಬರುತ್ತದೆ ಎಂದು ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿಯ ಶ್ರೀ ಮಹಮ್ಮಾಯೀ ಕಟ್ಟೆಯಲ್ಲಿ ವರ್ಷಾವಧಿ ಮಾರಿ ಪೂಜೆಯ ಸಂದರ್ಭದಲ್ಲಿ ಶ್ರೀ ಮಹಮ್ಮಾಯೀ ಭಕ್ತ ವೃಂದ ಕಿನ್ನಿಗೋಳಿಯ ಆಶ್ರಯದಲ್ಲಿ ನಡೆದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಸಾಧನ ಕಲಾವಿದ ಗಂಗಾಧರ ಶೆಟ್ಟಿಗಾರ್ ಗೋಳಿಜೋರರನ್ನು ಗೌರವಿಸಲಾಯಿತು.
ಧನಂಜಯ ಶೆಟ್ಟಿಗಾರ್, ಉದ್ಯಮಿ ಗಣೇಶ್ ಕಾಮತ್ ಕಿನ್ನಿಗೋಳಿ, ಸುಮಿತ್ ಕುಮಾರ್, ಶಂಕರ ಬಿ. ಕೋಟ್ಯಾನ್, ರಘುರಾಮ್ ಪುನರೂರು, ಸುರೇಶ್ ಪದ್ಮನೂರು, ಕೆ. ಬಿ. ಸುರೇಶ್ ಉಪಸ್ಥಿತರಿದ್ದರು.
Kshetra Samachara
05/05/2022 09:47 pm