ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಎ,5ರಂದು ಚಪ್ಪರ ಏರುವುದು ಭಂಡಾರ ತರಲು ಖಂಡಿಗೆ ಬೀಡು ತೆರಳುವ ಕಾರ್ಯಕ್ರಮ ನಡೆಯಿತು.ಸಂಜೆ 6 ಗಂಟೆಗೆ ಗ್ರಾಮದ ಮಹಿಳಾ ಭಕ್ತರಿಂದ ಶಿವ ಸಹಸ್ರ ನಾಮಾರ್ಚನೆ ,ರಾತ್ರಿ 9:30 ಕ್ಕೆ ಖಂಡಿಗೆ ಬೀಡು ಉಳ್ಳಾಯ ದೈವಸ್ಥಾನ ದಿಂದ ಹಾಗೂ ಶ್ರೀ ಕಾಂತು ಲಕ್ಕಣ ಗುರಿಕಾರರ ಮನೆಯಿಂದ ಭಂಡಾರ ಆಗಮನ ಹಾಗೂ ಧ್ವಜಾರೋಹಣ ನಡೆಯಿತು.
ಎ.6 ಬೆಳಿಗ್ಗೆ 5 ಗಂಟೆಗೆ ಉಳ್ಳಾಯ ದೈವದ ನೇಮೋತ್ಸವ ಇಷ್ಟ ದೇವತೆ, ಮೂಲ ಮಹಿಷಂದಾಯ , ಬಬ್ಬರ್ಯ ಹಾಗೂ ಪರಿವಾರ ದೈವಗಳ ನೇಮ ಮತ್ತು ಕಾಂತಾಬಾರೆ ಬೂದಾಬಾರೆ ಯರಿಗೆ ಪಂಚಕಜ್ಜಾಯ ಸೇವೆ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ಬಳಿಕವೂ ಓಡ್ಯ0ತಾಯ ದೈವದ ನೇಮೋತ್ಸವ ನಡೆಯಿತು.
ಎ.7 ಗುರುವಾರ ಧ್ವಜಾವರೋಹಣ, ಭಂಡಾರ ನಿರ್ಗಮನ ನಡೆಯಿತು. ಈ ಸಂದರ್ಭ ದೈವಸ್ಥಾನದ ಅನುವಂಶಿಕ ಮುಕ್ತೇಸರರು, ಅಧ್ಯಕ್ಷರು, ಆಡಳಿತ ಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/04/2022 12:04 pm