ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: "ಮಹಿಳೆ ಸಮಾಜದ ನಿಜವಾದ ಶಕ್ತಿ ಆಕೆ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ"

ಸುರತ್ಕಲ್: ಸುರತ್ಕಲ್ ಸಮೀಪದ ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ವತಿಯಿಂದ ಮೆಡಿಕಲ್ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು

ಕಾರ್ಯಕ್ರಮ ಅಧ್ಯಕ್ಷತೆ ಯನ್ನು ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜ್ ನ ನಿರ್ದೇಶಕರಾದ ವಿಜಯಲಕ್ಷ್ಮಿ ಆರ್ ರಾವ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಎ ಶ್ಯಾಮ ರಾವ್ ಫೌಂಡೇಶನ್ ನ ಕಾರ್ಯದರ್ಶಿ ಎ ಮಿತ್ರ ಎಸ್ ರಾವ್ ಮಾತನಾಡಿ ಮಹಿಳಾ ದಿನವನ್ನು ಒಂದು ದಿನದ ಮಟ್ಟಿಗೆ ಸೀಮಿತವಾಗುವುದರ ಬದಲು ಮಹಿಳಾ ಹಕ್ಕುಗಳು ಮತ್ತು ಸಾಮಾಜಿಕ ಶಾಂತಿಗಾಗಿ ನಿತ್ಯ ಹೋರಾಟಗಳು ನಡೆದಾಗ ಮಹಿಳಾ ದಿನಾಚರಣೆಗೆ ಮಹತ್ವ ಬರುತ್ತದೆ.ಮಹಿಳೆ ಸಮಾಜದ ನಿಜವಾದ ಶಕ್ತಿ ಆಕೆ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದುದು ಎಂದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಕಾಲೇಜು ಕುಲಪತಿ ಸಿಎ ರಾಘವೇಂದ್ರರಾವ್, ಉಪಕುಲಪತಿ ಡಾ. ಎ ಶ್ರೀನಿವಾಸ್ ರಾವ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಡಿ ಎಂ ರೋಜಾರಿಯೋ, ಶ್ರೀನಿವಾಸ್ ಆಸ್ಪತ್ರೆ, ಡೀನ್ ಡಾ ಉದಯ ಕುಮಾರ್ ರಾವ್,ಅನಿತಾ ಸಿಕ್ವೇರಾ, ಅಪರ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು

ಇದೇ ಸಂದರ್ಭದಲ್ಲಿ ಫಿಟ್ನೆಸ್ ಕೋಚ್ ನಯನ ಡಿ ಶೆಟ್ಟಿ ಹಾಗೂ ರಿಕ್ಷಾ ಯೂನಿಯನ್ ನ ವಿಜಯಲಕ್ಷ್ಮಿ ಹೆಚ್ ಎನ್ ರವರನ್ನು ಗೌರವಿಸಲಾಯಿತು

ಡಾ. ಜೆವೆಲ್ ಸ್ವಾಗತಿಸಿದರು, ಡಾ. ಅಗ್ನೆಸ್ ರೋಸ್ ನಿರೂಪಿಸಿದರು. ರವೀನ ಧನ್ಯವಾದ ಅರ್ಪಿಸಿದರು.

Edited By : PublicNext Desk
Kshetra Samachara

Kshetra Samachara

08/03/2022 07:15 pm

Cinque Terre

1.18 K

Cinque Terre

0

ಸಂಬಂಧಿತ ಸುದ್ದಿ